ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಚುನಾವಣಾ ಫಲಿತಾಂಶ (Election Results Haryana 2024) ಮಂಗಳವಾರ (ಅ.8) ಹೊರಬೀಳಲಿದೆ. 10 ವರ್ಷಗಳ ಬಳಿಕ, ಆರ್ಟಿಕಲ್ 370 ರದ್ದಾದ ಬಳಿಕ ಕಣಿವೆನಾಡಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದು ಯಾರು? ಬಿಜೆಪಿನಾ? ಎನ್‌ಸಿ-ಕಾಂಗ್ರೆಸ್ (Congress-NC) ಮೈತ್ರಿಕೂಟನಾ? ಅಥ್ವಾ ಪಿಡಿಪಿನಾ ಎಂಬ ಪ್ರಶ್ನೆಗೆ ಇಂದು ನಿಖರ ಉತ್ತರ ಸಿಗಲಿದೆ.
ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಮತ ಎಣಿಕೆ ಹಿನ್ನೆಲೆ ಚುನಾವಣೆ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಇಂದು ಜಮ್ಮು- ಕಾಶ್ಮೀರದ 28 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ, ಇಂಡಿಯಾ ಕೂಟ, ಮೆಹಬೂಬಾ ಮುಫ್ತಿ ಬೆಂಬಲದ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್
ಇನ್ನೂ ಹರಿಯಾಣ ಫಲಿತಾಂಶವೂ ಸಾಕಷ್ಟು ಕುತೂಹಲ ಕೆರಳಿಸಿದೆ. 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತಾ? ವಿಪಕ್ಷ ಕಾಂಗ್ರೆಸ್ ಗೆದ್ದು ಆಡಳಿತದ ಚುಕ್ಕಾಣಿ ಹಿಡಿಯುತ್ತಾ ಎಂಬುದು ಕುತೂಹಲಕಾರಿ ಅಂಶ. ಇದ್ರ ಮಧ್ಯೆ ಎಕ್ಸಿಟ್ ಪೋಲ್‌ಗಳೆಲ್ಲಾ ಕಾಂಗ್ರೆಸ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗುತ್ತಾ ಅನ್ನೋದು ಗೊತ್ತಾಗಲಿದೆ. ಇದನ್ನೂ ಓದಿ: ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ – 6 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್
ಹರಿಯಾಣ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
ಮ್ಯಾಟ್ರಿಜ್ ಸಮೀಕ್ಷೆ: ಕಾಂಗ್ರೆಸ್ 55-62, ಬಿಜೆಪಿ 18-24, ಐಎನ್ಎಲ್ಡಿ 3-6, ಜೆಜೆಪಿ 03, ಇತರರು 2-5
ಎಬಿಪಿ ಸಮೀಕ್ಷೆ: ಕಾಂಗ್ರೆಸ್ – 57, ಬಿಜೆಪಿ – 27, ಇತರೆ – 06
ದೈನಿಕ್ ಭಾಸ್ಕರ್: ಕಾಂಗ್ರೆಸ್ 44-54, ಬಿಜೆಪಿ 19-29, ಐಎನ್ಎಲ್ಡಿ 1-5, ಜೆಜೆಪಿ- 1, ಇತರರು 4-10
ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
ಸಿ ವೋಟರ್ – ಆಜ್ ತಕ್
ಕಾಂಗ್ರೆಸ್ + ಎನ್‌ಸಿ – 11-15
ಬಿಜೆಪಿ – 27-31
ಪಿಡಿಪಿ – 02
ಇತರೆ – 01
ದೈನಿಕ್ ಬಾಸ್ಕರ್
ಕಾಂಗ್ರೆಸ್ + ಎನ್‌ಸಿ – 35-40
ಬಿಜೆಪಿ – 20-25
ಪಿಡಿಪಿ – 4-7
ಇತರೆ – 12-16
ಪೀಪಲ್ ಪ್ಲಸ್
ಕಾಂಗ್ರೆಸ್ + ಎನ್‌ಸಿ – 40-48
ಬಿಜೆಪಿ – 27-32
ಪಿಡಿಪಿ – 7-11
ಇತರೆ – 4-6
ಇಂಡಿಯಾ ಟುಡೆ- ಸಿ ವೋಟರ್
ಕಾಂಗ್ರೆಸ್ + ಎನ್‌ಸಿ – 40-48
ಬಿಜೆಪಿ – 27-32
ಪಿಡಿಪಿ – 6-12
ಇತರೆ – 6-11