ಶ್ರೀನಗರ: ಭಯೋತ್ಪಾದಕರು ಮನಬಂದಂತೆ ಕಾರ್ಮಿಕರ ಮೇಲೆ ಗುಂಡು ಹರಿಸುತ್ತಿದ್ದು, ಪರಿಣಾಮ ಇಬ್ಬರು ಸ್ಥಳೀಯೇತರ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ವಾನ್ಪೋಹ್ ಪ್ರದೇಶದಲ್ಲಿ ನಡೆದಿದೆ.
ಸಿಐಡಿ ಮೂಲಗಳನ್ನು ಪ್ರಕಾರ, ಕಾಶ್ಮೀರಿ ಅಲ್ಲದ ಮೂವರು ಕಾರ್ಮಿಕರಾದ ರಾಜಾ ರೇಶಿ ದೇವ್, ಜೋಗಿಂದರ್ ರೇಶಿ ದೇವ್ ಮತ್ತು ಚುಂಚುನ್ ರೇಶಿ ದೇವ್ ಎಂಬವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಈ ಮೂವರಲ್ಲಿ ರಾಜಾ ರೇಶಿ ದೇವ್, ಜೋಗಿಂದರ್ ರೆಶಿ ದೇವ್ ಮೃತಪಟ್ಟಿದ್ದು, ಚುಂಚುನ್ ರೇಶಿ ದೇವ್ ಅವರಿಗೆ ಗಾಯವಾಗಿದೆ. ಇದನ್ನೂ ಓದಿ: ಬಾಲಕಿ ಅತ್ಯಾಚಾರ ಪ್ರಕರಣ – ಎಸ್‍ಪಿ, ಬಿಎಸ್‍ಪಿ ಜಿಲ್ಲಾ ಅಧ್ಯಕ್ಷ ಸೇರಿ 7 ಮಂದಿ ಅರೆಸ್ಟ್
Advertisement
Advertisement
ಶನಿವಾರ ಬಿಹಾರ ಮೂಲದ ಗೋಲ್ಗಪ್ಪ ಮಾರಾಟ ಮಾಡುತ್ತಿದ್ದ ಅರವಿಂದ್ ಕುಮಾರ್ ಅವರನ್ನು ಶ್ರೀನಗರದ ಈದ್ಗಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಉತ್ತರ ಪ್ರದೇಶದ ಕಾರ್ಮಿಕ ಸಗೀರ್ ಅಹ್ಮದ್ ಅವರನ್ನು ಪುಲ್ವಾಮಾದಲ್ಲಿ ಹತ್ಯೆಗೈದಿದ್ದರು.
Advertisement
ಈ ಮೊದಲು ಮೂವರನ್ನು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಇದರಲ್ಲಿ ಪ್ರಮುಖ ನಗರದ ಅತ್ಯಂತ ಪ್ರಸಿದ್ಧ ಔಷಧಾಲಯದ ಮಾಲೀಕ, ಕಾಶ್ಮೀರಿ ಪಂಡಿತ್ ಉದ್ಯಮಿ ಮಖನ್ ಲಾಲ್ ಬಿಂದ್ರೂ ಮತ್ತು ಬಿಹಾರದ ನಿವಾಸಿ ಗೋಲ್ಗಪ್ಪ ಮಾರಾಟ ಮಾಡುವ ಮೂಲಕ ತನ್ನ ದೈನಂದಿನ ಜೀವನ ನಡೆಸುತ್ತಿದ್ದ ಅರವಿಂದ್ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇದನ್ನೂ ಓದಿ: ಸಿಲಿಂಡರ್ ಸ್ಪೋಟ – ಮನೆ ಬೆಂಕಿಗಾಹುತಿ
Advertisement
ಕಾಶ್ಮೀರ ಪೊಲೀಸರ ಉಗ್ರ ನಿಗ್ರಹ ಘಟಕದ ಕೇಂದ್ರ ಕಚೇರಿಯಾದ ಹಿರಿಯ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಇಕ್ಬಾಲ್ ಪಾರ್ಕ್‍ನಲ್ಲಿ ಔಷಧಾಲಯದಲ್ಲಿ ಔಷಧ ವಿತರಿಸುವಾಗ ಬಿಂದ್ರೂ ಅವರನ್ನು ಸಂಜೆ ಉಗ್ರರು ದಾಳಿ ಮಾಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.