ಶ್ರೀನಗರ: ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕಳೆದ ವರ್ಷ ಫೆಬ್ರವರಿ 14ರಂದು 40 ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಜಿಲ್ಲೆಯಲ್ಲಿಯೇ ಮೂವರು ಉಗ್ರರನ್ನು ಭಾರತೀಯ ಸೇನೆ ಎನ್‍ಕೌಂಟರ್ ಮಾಡಿದೆ.
ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಇಂದು ನಸುಕಿನ ಜಾವ ಈ ಎನ್‍ಕೌಂಟರ್ ನಡೆದಿದೆ. ಭಾರತೀಯ ಸೇನಾಪಡೆ, ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜೊತೆಗೂಡಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Three Ansar Ghazwa ul Hind terrorists killed in encounter in J-K's Tral
Read @ANI Story | https://t.co/MpgdBZiiSx pic.twitter.com/TLZhDcE4B9
— ANI Digital (@ani_digital) February 19, 2020
Advertisement
ಮಂಗಳವಾರ ಟ್ರಾಲ್ ಪ್ರದೇಶದಲ್ಲಿ ಉಗ್ರರು ಅಡುಗಿ ಕುಳಿತಿರುವ ಬಗ್ಗೆ ಸೇನೆಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಭಾರತೀಯ ಸೇನಾಪಡೆ, ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜೊತೆಗೂಡಿ ಮಂಗಳವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದರು.
Advertisement
ಈ ಮೂವರು ಉಗ್ರರು ‘ಅನ್ಸರ್ ಘಾಜ್ವಾ ಉಲ್ ಹಿಂದ್’ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದು, ಉಗ್ರರನ್ನು ಜಂಗೀರ್ ರಫೀಖ್ ವಾನಿ, ರಾಜಾ ಉಮರ್ ಮಖ್ಬೂಲ್ ಭಟ್ ಮತ್ತು ಉಜೈರ್ ಅಮಿನ್ ಭಟ್ ಎಂದು ಗುರುತಿಸಲಾಗಿದೆ ಅಂತ ಭಾರತೀಯ ಸೇನೆ ತಿಳಿಸಿದೆ.