ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದ್ರಾಸ್‌ನಲ್ಲಿರುವ ಜಾಮಿಯಾ ಮಸೀದಿಯಲ್ಲಿ (Jamia Masjid) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮಸೀದಿ ಅಪಾರ ಹಾನಿಗೊಳಗಾಗಿದೆ.
A massive fire completely damaged Jamia Masjid in Drass area of Kargil. The fire was later doused with the help of Army, Police and Fire and Emergency department, however, it caused massive damage to the Masjid. pic.twitter.com/898bUbYdik
— ANI (@ANI) November 16, 2022
Advertisement
ಭಾರತೀಯ ಸೇನೆ (Indian Army), ಪೊಲೀಸ್ (Police), ಅಗ್ನಿಶಾಮಕ ಹಾಗೂ ತುರ್ತು ವಿಭಾಗದ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಂಬಳ ನೀಡದಿದ್ದರೆ 108 ಅಂಬುಲೆನ್ಸ್ ಸೇವೆ ಸ್ಥಗಿತ – GVK ಹೊಣೆ ಎಂದ ಚಾಲಕರು
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ಜಾಮಿಯಾ ಮಸೀದಿಯ (Jamia Masjid) ಉಸ್ತುವಾರಿ, ದ್ರಾಸ್‌ನ ಅತ್ಯಂತ ಹಳೆಯ ಮಸೀದಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ದುರದೃಷ್ಟಕರ ಸಂಗತಿ. ದ್ರಾಸ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಆದರೆ ಇಲ್ಲಿ ಒಂದೇ ಒಂದು ಅಗ್ನಿಶಾಮಕ ಸೇವೆಯೂ ಇಲ್ಲ. ಇಂತಹ ಘಟನೆಗಳು ಅನೇಕ ಬಾರಿ ನಡೆದಿದ್ದರೂ ಕೇಂದ್ರಾಡಳಿತ ಪ್ರದೇಶ ಇನ್ನೂ ಬುದ್ದಿ ಕಲಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ