ಲಕ್ನೋ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26 ರಿಂದ ಮಸೀದಿ ಪರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಜಾಮಿಯತ್ ಉಲಮಾ-ಇ-ಹಿಂದ್ ಮುಸ್ಲಿಂ ಸಂಘಟನೆಯು ಮೇ 28, 29ರಂದು ಬೃಹತ್ ಸಮಾವೇಶಕ್ಕೆ ಕರೆ ನೀಡಿದೆ.
ಉತ್ತರಪ್ರದೇಶದ ದೇವಬಂದ್‌ನಲ್ಲಿ ಬೃಹತ್ ಸಭೆ ನಡೆಯಲಿದ್ದು, ಸುಮಾರು 5 ಸಾವಿರ ಮುಸ್ಲಿಂ ಸಂಘಟನೆಗಳು ಭಾಗವಹಿಸಲಿವೆ. ಈ ಸಭೆಯಲ್ಲಿ ಜ್ಞಾನವಾಪಿ, ಮಥುರಾ ಹಾಗೂ ಕುತುಬ್ ಮಿನಾರ್‌ನಂತಹ ಸ್ಮಾರಕಗಳ ಸುತ್ತಮುತ್ತಲಿನ ಸಮಸ್ಯೆಗಳನ್ನು ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಹಿಂದೂ ಮೂರ್ತಿಗಳ ಪುನರ್‌ಸ್ಥಾಪನೆಗೆ ಮನವಿ – ತೀರ್ಪು ಕಾಯ್ದಿರಿಸಿದ ಕೋರ್ಟ್
Advertisement
Advertisement
ಜಮಿಯತ್-ಉಲೇಮಾ-ಇ-ಹಿಂದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮಹಮೂದ್ ಅಸಾದ್ ಮದನಿ ಅವರು ಈ ಹಿಂದೆ ಜ್ಞಾನವಾಪಿ ಪ್ರಕರಣದಲ್ಲಿ ಮಧ್ಯಪ್ರವೇಶಿಸದಂತೆ ಸಂಘಟನೆಗಳನ್ನು ಒತ್ತಾಯಿಸಿದ್ದರು. ಆದರೆ ಈಗ ಮಂದಿರ ಮಸೀದಿಗಳ ಚರ್ಚೆಯ ವಿರುದ್ಧ ಹಲವು ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ
Advertisement
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಕುತುಬ್ ಮಿನಾರ್ ಅನ್ನು ಕುತುಬ್ ಉದ್‌ದಿನ್ ಐಬಕ್ ನಿರ್ಮಿಸಿದ್ದಲ್ಲ. ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆ ನಂತರವೇ ವಿವಾದ ಭುಗಿಲೆದ್ದಿದೆ ಎಂದು ಸಂಘಟನೆಗಳು ಆರೋಪಿಸಿವೆ.
Advertisement
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಕ್ತಾರ ವಿನೋದ್ ಬನ್ಸಾಲ್ ಸಹ, ಕುತುಬ್ ಮಿನಾರ್ ವಾಸ್ತವವಾಗಿ `ವಿಷ್ಣು ಸ್ತಂಭ’ ಮತ್ತು 27 ಹಿಂದೂ-ಜೈನ ದೇವಾಲಯಗಳನ್ನು ಕೆಡವಿ, ಅದರಿಂದ ಪಡೆದ ವಸ್ತುಗಳಿಂದ ಈ ಸ್ತಂಭವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.