ವಾಷಿಂಗ್ಟನ್: 2.9 ಕೋಟಿ ಬೆಳಕಿನ ವರ್ಷ ಹಿಂದೆ ಜಗತ್ತು ಹೇಗೆ ಕಂಗೊಳಿಸುತ್ತಿತ್ತು? ನಕ್ಷತ್ರ ಪುಂಜಗಳು (SpiralGalaxy) ಯಾವ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು ಎಂಬ ಪ್ರಶ್ನೆಗೆ ನಾಸಾ (NASA) ಸ್ಪಷ್ಟ ಉತ್ತರ ಕೊಟ್ಟಿದೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವೈಟ್‌ಹೌಸ್‌ನಲ್ಲಿ, 13 ದಶಕೋಟಿ ವರ್ಷಗಳಷ್ಟು ಹಿಂದಿನ ಬಾಹ್ಯಾಕಾಶ ಲೋಕವನ್ನು ತೆರೆದಿಟ್ಟಿದ್ದ ಜೇಮ್ಸ್‌ವೆಬ್ ಟೆಲಿಸ್ಕೋಪ್ (James Webb Telescope) ಇದೀಗ ಮತ್ತೊಂದು ನಕ್ಷತ್ರಪುಂಜವನ್ನು ತೆರೆದಿಡುವ ಮೂಲಕ ವಿಸ್ಮಯ ಉಂಟುಮಾಡಿದೆ. ಈ ನಕ್ಷತ್ರಪುಂಜ ಕ್ಷೀರ ಪತಕ್ಕಿಂತಲೂ ಸ್ವಲ್ಪ ಡೊಡ್ಡದಾಗಿದ್ದು, ಸುರುಳಿಯಾಕಾರದಲ್ಲಿದೆ. ಇದನ್ನೂ ಓದಿ: ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ
ಈ ಹಿಂದೆ ಹಬಲ್ ದೂರದರ್ಶಕವು ಐಸಿ-5332 ಪ್ರಭಾವಶಾಲಿ ಚಿತ್ರವನ್ನು ಸೆರೆಹಿಡಿದಿತ್ತು. ಆದರೆ ಸೆರೆ ಹಿಡಿಯಲಾದ ಮಿರರ್ ಹೆಚ್ಚು ತಂಪಾಗಿರದ ಕಾರಣ ವಿದ್ಯುತ್ಕಾಂತೀಯ ವರ್ಣಪಲ್ಲಟದಿಂದಾಗಿ ಅತಿಗೆಂಪು ವರ್ಣ ಪ್ರದೇಶಗಳನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಾಸಾ (NASA) ವಿಜ್ಞಾನಿಗಳು ಎಂಐಅರ್‌ಐ (MIRI) ವಿಧಾನ ಬಳಿಸಿಕೊಂಡು ನಕ್ಷತ್ರ ಪುಂಜಗಳನ್ನು ಸೆರೆಹಿಡಿದೆ. ಎಂಐಆರ್‌ಐ (ಮಿಡ್-ಇನ್‌ಫ್ರಾರೆಡ್ ಇನ್‌ಸ್ಟ್ರುಮೆಂಟ್) ಇತರ ವೀಕ್ಷಣಾಲಯಗಳಿಗಿಂತ 33 ಡಿಗ್ರಿ ಸೆಲ್ಸಿಯಸ್ ಕಡಿಮೆ, ಶೂನ್ಯ ತಾಪಮಾನಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿರುವ ಹಾಗೂ 266 ಡಿಗ್ರಿ ಸೆಲ್ಸಿಯಸ್ ನಷ್ಟು ಅತ್ಯಂತ ಶೀತ ತಾಪಮಾನದಲ್ಲಿ ಕಾರ್ಯ ನಿವರ್ಹಿಸುತ್ತದೆ.
ಪ್ರಸ್ತುತ ಸೆರೆಹಿಡಿಯಲಾದ ಐಸಿ-5332 ಚಿತ್ರವು 66 ಸಾವಿರ ಬೆಳಕಿನ ವರ್ಷಗಳ ವ್ಯಾಸ ಹೊಂದಿದೆ. ಈ ನಕ್ಷತ್ರಪುಂಜವು ಭೂಮಿಗೆ ಬಹುತೇಕ ಮುಖಾಮುಖಿಯಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?
2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಮೆರಿಕ ಅಂತರಿಕ್ಷಕ್ಕೆ ಕಳುಹಿಸಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್ (ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಮಹತ್ವದ ಚಿತ್ರಣ ಸೆರೆಹಿಡಿಯಲಾಗಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದರು.