ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಮತ್ತೊಂದು ಸುತ್ತಿನ ರಿ-ರಿಲೀಸ್ ಗೆ ರೆಡಿ ಆಗಿದೆ. ಈ ಬಾರಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಮುಂದೆ ಬರುತ್ತಿದೆ. ಆ ತಂತ್ರಜ್ಞಾನದ ಮೂಲಕ ಸ್ವತಃ ಅಪ್ಪು ಧ್ವನಿಯಲ್ಲಿಯೇ ಜೇಮ್ಸ್ ಸಿನಿಮಾ ನೋಡಬಹುದಾಗಿದೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ
Advertisement
ಹೌದು, ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಧ್ವನಿ ಇರಲಿಲ್ಲ. ಅವರ ಬದಲಾಗಿದೆ, ಅಪ್ಪು ಸಹೋದರ ಶಿವರಾಜ್ ಕುಮಾರ್ ಆ ಪಾತ್ರಕ್ಕೆ ಡಬ್ ಮಾಡಿದ್ದರು. ಇದೀಗ ವಿಶೇಷ ತಂತ್ರಜ್ಞಾನ ಬಳಸಿಕೊಂಡು, ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ ಸಂಭಾಷಣೆಯನ್ನೇ ಉಳಿಸಿಕೊಂಡು ಅದನ್ನು ರಿ ಗೇಯ್ನ ಮಾಡಿ ಜನರ ಮುಂದೆ ಮತ್ತೆ ಪುನೀತ್ ರಾಜ್ ಕುಮಾರ್ ಅವರನ್ನು ತಂದು ನಿಲ್ಲಿಸುತ್ತಿದ್ದಾರೆ ಚಿತ್ರತಂಡ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ
Advertisement
Advertisement
ಈ ವಿಷಯದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ‘ಇಂಥದ್ದೊಂದು ತಂತ್ರಜ್ಞಾನ ಇದೆ ಅಂತ ನನಗೆ ಗೊತ್ತೇ ಇರಲಿಲ್ಲ. ವಿಷಯ ಕೇಳಿ ತುಂಬಾ ಸಂತೋಷವಾಯಿತು. ಅಪ್ಪು ಅವರ ವಾಯ್ಸ್ ನಲ್ಲೇ ಸಿನಿಮಾ ನೋಡುವುದು ಇನ್ನೂ ಖುಷಿ ಕೊಡುವ ವಿಚಾರ. ಸಿನಿಮಾ ರಿಲೀಸ್ ಗೂ ಮುನ್ನ ಈ ತಂತ್ರಜ್ಞಾನ ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು’ ಎಂದಿದ್ದಾರೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್
Advertisement
ಪುನೀತ್ ರಾಜ್ ಕುಮಾರ್ ಕನಸಿನ ಶಕ್ತಿಧಾಮದಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತಿದೆ. ನಿನ್ನೆಯಿಂದ ಬೇಸಿಗೆ ಶಿಬಿರ ಆರಂಭವಾಗಿದೆ. ಈ ಶಿಬಿರಕ್ಕೆ ಚಾಲನೆ ಕೊಡಲು ಶಿವರಾಜ್ ಕುಮಾರ್ ಪತ್ನಿ ಸಮೇತ ಬಂದಿದ್ದರು. ಕೆಲ ಹೊತ್ತು ಮಕ್ಕಳೊಂದಿಗೆ ಮಕ್ಕಳಾಗಿ ಶಿವಣ್ಣ ಸಮಯ ಕಳೆದರು.