ನವದೆಹಲಿ: ಜಾಮಾ ಮಸೀದಿಗೆ (Jama Masjid) ಮಹಿಳೆ (Women) ಒಬ್ಬಳೇ ಅಥವಾ ಮಹಿಳೆಯರ ಗುಂಪು ಪುರುಷರಿಲ್ಲದೇ ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಪುರುಷರು ಜೊತೆಗಿಲ್ಲದೇ ಮಹಿಳೆಯರು ಜಾಮಾ ಮಸೀದಿ ಪ್ರವೇಶ ನಿಷೇಧಿಸಲಾಗಿದೆ ಎಂದು ಜಾಮಾ ಮಸೀದಿ ನೋಟಿಸ್ ಹೊರಡಿಸಿದೆ. ಕಳೆದ ಕೆಲದಿನಗಳ ಹಿಂದೆ ಈ ಬಗ್ಗೆ ಜಾಮಾ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯನ್ನು ಪ್ರವೇಶ ದ್ವಾರದ ಬಳಿ ಹಾಕಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್
ಜಾಮಾ ಮಸೀದಿಯ ಈ ಪ್ರಕಟನೆ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಜಾಮಾ ಮಸೀದಿ ತೆಗೆದುಕೊಂಡಿರುವ ನಿರ್ಧಾರ ಅಸಂವಿಧಾನಿಕ ಎಂದು ಜರಿದಿದ್ದಾರೆ. ಈ ಹಿಂದೆ ಜಾಮಾ ಮಸೀದಿಗೆ ಮಹಿಳೆಯರಿಗೂ ಪ್ರವೇಶ ನೀಡಲಾಗುತ್ತಿತ್ತು. ಇದೀಗ ಮಸೀದಿ ಪ್ರವೇಶ ನಿಷೇಧಿಸಲು ಮುಂದಾಗಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ