ಚಿಕ್ಕಬಳ್ಳಾಪುರ: ಅವಳಿ ನಗರಗಳಾದ ಚಿಕ್ಕಬಳ್ಳಾಪುರ (Chikkaballapura) ಮತ್ತು ದೊಡ್ಡಬಳ್ಳಾಪುರ (Doddaballapura) ಜನರಿಗೆ ಕುಡಿಯುವ ನೀರು ಪೂರೈಸುವ ಏಕೈಕ ಜಲಾಶಯ ಜಕ್ಕಲಮಡಗು (Jakkalamadagu) ಜಲಾಶಯ. ಕಳೆದ ವರ್ಷ ಒಂದಲ್ಲ ಎರಡಲ್ಲ ಮೂರು ಬಾರಿ ಕೋಡಿ ಹರಿದಿದ್ದ ಜಲಾಶಯ ಈ ಬಾರಿ ಒಮ್ಮೆಯೂ ಕೋಡಿ ಹರಿದಿಲ್ಲ.
ಬರಗಾಲದ ಬೆನ್ನಲ್ಲೇ ಜಲಾಶಯದ ನೀರು ಸಹ ಬತ್ತಿ ಹೋಗುತ್ತಿದ್ದು, ಎರಡು ನಗರಗಳ ಜನರಿಗೆ ಈಗಲೇ ಆತಂಕ ಶುರುವಾಗಿದೆ. ಮುಂದೆ ಕುಡಿಯುವ ನೀರಿಗೆ ಏನು ಮಾಡೋದು ಅನ್ನೋ ಚಿಂತೆ ಈಗಲೇ ಕಾಡೋಕೆ ಶುರುವಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿಗೆ ಜಕ್ಕಲಮಡಗು ಜಲಾಶಯವೇ ಕಾವೇರಿ. ಎರಡು ನಗರಗಳ ಲಕ್ಷಾಂತರ ಮಂದಿಗೆ ಕುಡಿಯುವ ನೀರು (Drinking Water) ಕೊಡುವ ಏಕೈಕ ಜಲಾಶಯವಿದು. ಇದನ್ನೂ ಓದಿ: ಅಕ್ರಮ ಹಣ ಪತ್ತೆ ಪ್ರಕರಣ ಸಿಬಿಐಗೆ ವಹಿಸಲಿ: ಅಶ್ವಥ್ ನಾರಾಯಣ್
ಕಳೆದ 3 ವರ್ಷಗಳಿಂದ ಮೈದುಂಬಿ ಕೋಡಿ ಹರಿಯುತ್ತಿದ್ದ ಈ ಜಲಾಶಯ ಈ ಬಾರಿ ಕೋಡಿ ಹರಿದಿಲ್ಲ. ಹೀಗಾಗಿ ಜಕ್ಕಲಮಡಗು ಜಲಾಶದಯಲ್ಲಿ ಕಳೆದ ಬಾರಿ ಸಂಗ್ರಹವಾಗಿದ್ದ ನೀರನ್ನು ಈ ಬಾರಿಯೂ ಬಳಸಲಾಗುತ್ತಿದೆ. ಈಗಾಗಲೇ ಜಲಾಶಯದ 60% ರಷ್ಟು ಪ್ರಮಾಣದ ನೀರು ಖಾಲಿಯಾಗಿದ್ದು, ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಜನರೇ ದಯಮಾಡಿ ನೀರನ್ನು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಕೊಡಬೇಕು: ಜಿಟಿ ದೇವೇಗೌಡ
ಜಕ್ಕಲಮಡಗು ಜಲಾಶಯದಿಂದ 60% ರಷ್ಟು ಭಾಗದ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹಾಗೂ 40%ರಷ್ಟು ಭಾಗದ ನೀರನ್ನು ದೊಡ್ಡಬಳ್ಳಾಪುರಕ್ಕೆ ಪೂರೈಸಲಾಗುತ್ತದೆ. ಆದರೆ ಈಗ ನೀರು ಕಡಿಮೆಯಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ದೊಡ್ಡಬಳ್ಳಾಪುರ ನಗರದ ಜನತೆಗೆ ನೀರು ಪೂರೈಸಲಾಗುತ್ತಿದೆ. ಇದರಿಂದ ಜನರಿಗೆ ಈಗಲೇ ನೀರಿನ ಅಭಾವ ಶುರುವಾಗಿದೆ. ಇದನ್ನೂ ಓದಿ: ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ
ಈಗಾಗಲೇ ಮಳೆಗಾಲ ಮುಗಿದು ಹೋಗಿದ್ದು, ಇನ್ನೂ ಮಳೆ ಬಂದು ಜಲಾಶಯ ತುಂಬೋದು ಅಷ್ಟಕಷ್ಟೇ. ಮತ್ತೊಂದೆಡೆ ಚಳಿಗಾಲ ಆರಂಭವಾಗಿದ್ದು, ಬೇಸಿಗೆ ಕಾಲ ಬರುವ ಮುನ್ನವೇ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ಮುಂದೆ ಏನು ಅನ್ನೋ ಚಿಂತೆ ಅಧಿಕಾರಿಗಳನ್ನು ಕಾಡೋಕೆ ಶುರುವಾಗಿದೆ. ಇದನ್ನೂ ಓದಿ: ಲಘು ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ – ಆಸ್ಪತ್ರೆಗೆ ಬರಬೇಡಿ ಎಂದ ಬೊಮ್ಮಾಯಿ
Web Stories