ನವದೆಹಲಿ: ಬ್ಯಾಂಕ್, ಟೆಲಿಕಾಂ ಸಂಸ್ಥೆಗಳಿಗೆ ಆಧಾರ್ ಜೋಡಣೆ ಮಾಡುವ ನಿಯಮವನ್ನು ಮುಂದುವರೆಸಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಹೇಳಿದ್ದಾರೆ.
ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿರುವ ಅರುಣ್ ಜೇಟ್ಲಿ, ಬ್ಯಾಂಕ್, ಟೆಲಿಕಾಂ ಸಂಸ್ಥೆಗಳಿಗೆ ಆಧಾರ್ ಬಳಕೆ ಮಾಡಲು ಅವಕಾಶ ನೀಡಲಾಗುವುದು. ಆದರೆ ಕೇಂದ್ರ ಸರ್ಕಾರ ಈ ಕುರಿತು ಹೊಸ ಕಾಯ್ದೆ ರೂಪಿಸುತ್ತಾ ಎಂಬುದರ ಕುರಿತು ಸಚಿವರು ಸ್ಪಷ್ಟಪಡಿಸಲಿಲ್ಲ.
Advertisement
Advertisement
ಇದೇ ವೇಳೇ ಆಧಾರ್ ಎಂಬುವುದು ಪೌರತ್ವದ ಸಂಕೇತವಲ್ಲ ಎಂದು ತಿಳಿಸಿರುವ ಅರುಣ್ ಜೇಟ್ಲಿ, ಸರ್ಕಾರ ವಿವಿಧ ಯೋಜನೆಗಳ ಲಾಭ ಮತ್ತು ಸಬ್ಸಿಡಿ ಪಡೆಯುವ ಒಂದು ವ್ಯವಸ್ಥೆಯಾಗಿದೆ. ಇದುವೇ ಆಧಾರ್ ನ ಮೂಲ ಉದ್ದೇಶವಾಗಿದೆ. ತಾರ್ಕಿಕ ತತ್ವದ ಆಧಾರದ ಮೇಲೆ ಆದಾಯ ತೆರಿಕೆ ಪಾವತಿಸುವ ಹಲವು ಪ್ರದೇಶಗಳಲ್ಲಿ ಆಧಾರ್ ಸಂಖ್ಯೆ ಸಂಪರ್ಕಿಸುವುದಕ್ಕೆ ಕೋರ್ಟ್ ಅವಕಾಶ ನೀಡಿದೆ ಎಂದು ತಿಳಿಸಿದರು. ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ: ಯಾವುದಕ್ಕೆ ಕಡ್ಡಾಯ?
Advertisement
ಸುಪ್ರೀಂ ಕೋರ್ಟ್ ಕಳೆದ ತಿಂಗಳು ಆಧಾರ್ ಗೆ ಸಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿತ್ತು. ಅಲ್ಲದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮಾತ್ರ ಆಧಾರ್ ಕಡ್ಡಾಯ ಮಾಡುಬಹುದು, ಆದರೆ ಖಾಸಗಿ ಚಟುವಟಿಕೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ತಿಳಿಸಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv