ಕೋಲ್ಕತ್ತಾ: 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಯುವ ಆಟಗಾರರು ಮಿಂಚುತ್ತಿದ್ದಾರೆ. ಅದರಲ್ಲೂ ಆರಂಭಿಕ ಪಂದ್ಯದಿಂದಲೂ ಯಶಸ್ವಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ತಂಡದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ (Yashasvi Jaiswal) ಐಪಿಎಲ್‌ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಹೆಸರಿನಲ್ಲಿದ್ದ ದಾಖಲೆಯನ್ನ ನುಚ್ಚು ನೂರು ಮಾಡಿದ್ದಾರೆ.
Advertisement
21 ವರ್ಷದ ಯುವಕ ಯಶಸ್ವಿ ಜೈಸ್ವಾಲ್ ಗುರುವಾರ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲೇ ಭರ್ಜರಿ 50 ರನ್ (6 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ರಾಹುಲ್ ದಾಖಲೆಯನ್ನ ಉಡೀಸ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಅಂತಿಮವಾಗಿ ಜೈಸ್ವಾಲ್ ಔಟಾಗದೇ 98 ರನ್ (47 ಎಸೆತ, 12 ಬೌಂಡರಿ, 5 ಸಿಕ್ಸರ್) ಚಚ್ಚಿದರು. ರಾಹುಲ್ 2018ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಜೈಸ್ವಾಲ್ ಇವರಿಬ್ಬರ ದಾಖಲೆಯನ್ನ ಮುರಿದಿದ್ದಾರೆ. ಇದನ್ನೂ ಓದಿ: IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್
Advertisement
Advertisement
ಅಂತಿಮವಾಗಿ ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ಪರ 47 ಎಸೆತದಲ್ಲಿ 12 ಫೊರ್ ಮತ್ತು 5 ಸಿಕ್ಸ್ ಮೂಲಕ 208.51ರ ಸ್ಟ್ರೈಕ್ರೇಟ್ನಲ್ಲಿ ಬರೋಬ್ಬರಿ 98 ರನ್ ಗಳಿಸಿ ಅಜೇಯರಾಗುಳಿದರು. ಆದ್ರೆ 98 ರನ್ ಗಳಿಸಿ ಶತಕ ವಂಚಿತರಾಗಿದ್ದು ನಿರಾಸೆ ಮೂಡಿಸಿತು. ಇದನ್ನೂ ಓದಿ: IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್
Advertisement
ಅಲ್ಲದೇ ಈ ಬಾರಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಯಶಸ್ವಿ ಜೈಸ್ವಾಲ್ 500ಕ್ಕೂ ಹೆಚ್ಚು ರನ್ ಗಳಿಸಿರುವ 2ನೇ ಆಟಗಾರ ಎನಿಸಿಕೊಂಡಿದ್ದಾರೆ. 12 ಪಂದ್ಯಗಳಲ್ಲಿ 52.27 ಸರಾಸರಿಯಲ್ಲಿ ಯಶಸ್ವಿ ಜೈಸ್ವಾಲ್ ಬರೋಬ್ಬರಿ 575 ರನ್ ಚಚ್ಚಿದ್ದಾರೆ. ಇದರಲ್ಲಿ 74 ಬೌಂಡರಿ ಹಾಗೂ 26 ಸಿಕ್ಸರ್‌ಗಳೂ ಸೇರಿವೆ. ಆರೆಂಜ್‌ಕ್ಯಾಪ್ ರೇಸ್‌ನ ಅಗ್ರ ಸ್ಥಾನದಲ್ಲಿ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ 11 ಪಂದ್ಯಗಳಲ್ಲಿ 576 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 45 ಬೌಂಡರಿ ಹಾಗೂ 32 ಸಿಕ್ಸರ್‌ಗಳೂ ಇದರಲ್ಲಿ ಸೇರಿವೆ.