JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ

Public TV
2 Min Read
Masood Azhar

ನವದೆಹಲಿ/ಇಸ್ಲಾಮಾಬಾದ್‌: ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ (PoK) ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್‌ ಎ ಮೊಹಮ್ಮದ್‌ (JEM) ಮುಖ್ಯಸ್ಥ ಮಸೂದ್‌ ಅಜರ್‌ (Masood Azhar) ಕುಟುಂಬದ 10 ಮಂದಿ ಸೇರಿ 14 ಮಂದಿ ಹತ್ಯೆಯಾಗಿದ್ದಾರೆ.

ಪಾಕ್‌ನ ಬಹಾವಲ್ಪುರದಲ್ಲಿ (Bahawalpur) ಉಗ್ರ ಸಂಘಟನೆಯ ಪ್ರಧಾನ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ಮಸೂದ್ ಕುಟುಂಬದ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸಿಂಧೂರ ಅಳಿಸಿದವರಿಗೆ ನಾರಿ ಶಕ್ತಿಯಿಂದಲೇ ಭಾರತ ಉತ್ತರ – ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಬಗ್ಗೆ ಗೊತ್ತಾ?

Masood Azhar 3

ಬಹಾವಲ್ಪುರದ ಸುಭಾನ್ ಅಲ್ಲಾ ಮಸೀದಿ ಮೇಲಿನ ದಾಳಿಯಲ್ಲಿ ಬಲಿಯಾದವರಲ್ಲಿ ಪೈಕಿ ಜೆಇಎಂ ಮುಖ್ಯಸ್ಥನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ಕುಟುಂಬದ 5 ಮಕ್ಕಳು ಸೇರಿದ್ದಾರೆ. ಇದರ ಜೊತೆಗೆ ಮಸೂದ್‌ನ ಆಪ್ತ ಸಹಚರ, ಆತನ ತಾಯಿ ಸೇರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಜರ್‌ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಉಗ್ರರು (Terrorists) ಮಾತ್ರವಲ್ಲ ಅವರ ಕುಟುಂಬವನ್ನು ನಾಶ ಮಾಡಬೇಕು. ಆಗ ಉಗ್ರರ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ. ಅವರಿಗೂ ನೋವು ಏನು ಎನ್ನುವುದು ಗೊತ್ತಾಗಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಈ ಜನರ ಆಗ್ರಹದಂತೆ ಮಸೂದ್‌ ಕುಟುಂಬವನ್ನೇ ಭಾರತ ನಾಶ ಮಾಡಿದೆ.  ಇದನ್ನೂ ಓದಿ: ಪಾಕ್‌ ಉಗ್ರರ ದಾಳಿಗೆ SCALP, HAMMER ಕ್ಷಿಪಣಿಯನ್ನೇ ಬಳಸಿದ್ದು ಯಾಕೆ?

Masood Azhar 2

ಅಜರ್‌ ಹಿನ್ನೆಲೆ ಏನು?
ನಿಷೇಧಿತ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜ‌ರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಪುಲ್ವಾಮಾ ದಾಳಿಯ ರೂವಾರಿ ಆಗಿದ್ದಾನೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‌ನಲ್ಲಿರುವ ಜೈಷ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ 2019ರ ಮೇ 1ರಂದು ವಿಶ್ವಸಂಸ್ಥೆ ಅಜರ್‌ನನ್ನ ಜಾಗತಿಕ ಉಗ್ರ ಎಂದು ಘೋಷಿಸಿತ್ತು.  ಇದನ್ನೂ ಓದಿ: I TOLD MODI – ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌ !

ಭಾರತದಿಂದ ಬಿಡುಗೆಯಾಗಿದ್ದು ಯಾವಾಗ?
1994ರಲ್ಲಿ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಅಜರ್‌ನನ್ನ ಬಂಧಿಸಲಾಗಿತ್ತು. ಆದರೆ 1999 ಡಿಸೆಂಬರ್‌ನಲ್ಲಿ ಭಾರತದ ವಿಮಾನ IC814 ಅನ್ನು ಹೈಜಾಕ್ ಮಾಡಿದಾಗ ಅಜರ್‌ನ್ನು ಬಿಡುಗಡೆ ಮಾಡಬೇಕೆಂದು ಅಪಹರಣಕಾರರು ಬೇಡಿಕೆಯೊಡ್ಡಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡು ಅಪಹರಣಕಾರರ ಒತ್ತಾಯಕ್ಕೆ ಮಣಿದು ಸರ್ಕಾರ ಅಜರ್‌ನನ್ನ ಬಿಡುಗಡೆ ಮಾಡಿತ್ತು.  ಇದನ್ನೂ ಓದಿ: ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್‌ ನರವಾಣೆ

ಪಾಕ್‌ ಉಗ್ರ ಸಂಘಟನೆ ಭಾರತದ ಮೇಲೆ ನಡೆಸಿದ ಪ್ರಮುಖ ದಾಳಿಗಳು
* ಡಿಸೆಂಬರ್ 2001: ಜೈಶ್ ಎ ಮೊಹಮ್ಮದ್‌ ಸಹಯೋಗದೊಂದಿಗೆ ಭಾರತೀಯ ಸಂಸತ್ತಿನ ಮೇಲೆ ದಾಳಿ.
* ಜುಲೈ 2006: ಮುಂಬೈ ಲೋಕಲ್ ಟ್ರೈನ್‌ನಲ್ಲಿ ಬಾಂಬ್ ಸ್ಫೋಟ, 180ಕ್ಕೂ ಹೆಚ್ಚು ಸಾವು.
* ನವೆಂಬರ್ 2008: ಮುಂಬೈ ಭಯೋತ್ಪಾದಕ ದಾಳಿ, 166 ಜನರ ಸಾವು.
* ಮಾರ್ಚ್ 2000: ಚಿಟ್ಟಿಸಿಂಗ್‌ಪೋರಾದಲ್ಲಿ 35 ಸಿಖ್ಖರ ಹತ್ಯೆ.

Share This Article