ನವದೆಹಲಿ: 32 ವರ್ಷದ ಹಿಂದೆ ನಡೆದಿರುವ ಅವಧೇಶ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿ, ಗ್ಯಾಂಗ್‍ಸ್ಟಾರ್ ಮುಕ್ತಾರ್ ಅನ್ಸಾರಿ (Mukhtar Ansari) ಗೆ ಉತ್ತರಪ್ರದೇಶದ ವಾರಣಾಸಿ ಕೋರ್ಟ್ (Varanasi Court Uttarpradesh) ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.
1991ರ ಆಗಸ್ಟ್ 3 ರಂದು ಕಾಂಗ್ರೆಸ್ ನಾಯಕ ಹಾಗೂ ಶಾಸಕ ಅಜಯ್ ರೈ (Ajay Rai) ಸಹೋದರ ಅವಧೇಶ್ ರೈ (Awadhesh Rai) ಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಘಟನೆ ವಾರಣಾಸಿಯಲ್ಲಿರುವ ಅಜಯ್ ರೈ ಮನೆಯಲ್ಲಿಯೇ ನಡೆದಿತ್ತು.
Varanasi’s MP MLA court awards life imprisonment to jailed mafia Mukhtar Ansari in 1991 Awadhesh Rai murder case pic.twitter.com/hcM7OTrN79
— ANI (@ANI) June 5, 2023
ಪ್ರಕರಣ ಸಂಬಂಧ ಅಜಯ್ ನೀಡಿದ ದೂರಿನಂತೆ ಮುಕ್ತಾರ್ ಅನ್ಸಾರಿ, ಭೀಮ್ ಸಿಂಗ್ ಹಾಗೂ ಮಾಜಿ ಶಾಸಕ ಅಬ್ದುಲ್ ಕಲೀಮ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಈ ಕುರಿತು ಸುದೀರ್ಘವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು ತನ್ನ ತೀರ್ಪನ್ನು ಪ್ರಕಟಿಸಿದೆ. ಇದರೊಂದಿಗೆ ನ್ಯಾಯಾಲಯ ಮಾಜಿ ಶಾಸಕನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮುಕ್ತಾರ್ ಅನ್ಸಾರಿಗೆ ಐಪಿಸಿ ಸೆಕ್ಷನ್ 302(ಕೊಲೆ) ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಇದನ್ನೂ ಓದಿ: ವಿದ್ಯುತ್ ಎಷ್ಟು ಬೇಕೋ ಅಷ್ಟೇ ಬಳಸಿ- ಬಿಜೆಪಿಗೆ ವಿವೇಕದ ಪಾಠ ಮಾಡಿದ ಸಿಎಂ
ಈ ಬಗ್ಗೆ ಅಜಯ್ ರೈ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಅದೆಷ್ಟೋ ವರ್ಷಗಳಿಂದ ಕಾದು ಕುಳಿತಿದ್ದ ನಮಗೆ ಇಂದು ನ್ಯಾಯ ಸಿಕ್ಕಿದೆ. ಇಡೀ ಕುಟುಂಬ ಈ ಆದೇಶಕ್ಕಾಗಿ ಕಾದು ಕುಳಿತಿತ್ತು. ಸದ್ಯ ನಮ್ಮ ತಾಳ್ಮೆಗೆ ಇಂದು ನ್ಯಾಯ ಸಿಕ್ಕಿದಂತಾಗಿದೆ. ಸಾಕಷ್ಟು ಬೆದರಿಕೆಗಳು ಬಂದವು. ಆದರೆ ಯಾವುದಕ್ಕೂ ನಾವು ಜಗ್ಗಲಿಲ್ಲ. ನಮ್ಮ ವಕೀಲರ ಪ್ರಯತ್ನದಿಂದಾಗಿ ಇಂದು ನ್ಯಾಯಾಲಯವು ನನ್ನ ಸಹೋದರನ ಕೊಲೆ ಪ್ರಕರಣದಲ್ಲಿ ಮುಕ್ತಾರ್ ಅಪರಾಧಿ ಎಂದು ಘೋಷಿಸಿದೆ ಎಂದು ಹೇಳಿದರು.