ಬೆಂಗಳೂರು: ಎಷ್ಟು ವಿದ್ಯುತ್ ಬಳಸುತ್ತಿದ್ದಿರೋ ಅಷ್ಟೇ ಬಳಸಬೇಕು. ಹೆಚ್ಚು ವಿದ್ಯುತ್ ಬಳಸಿದರೆ ದುಂದು ವೆಚ್ಚ ಆಗುತ್ತೆ. ನಾವೂ ಬದುಕಬೇಕು, ಸಮಾಜದಲ್ಲಿರೋರೂ ಬದುಕಬೇಕು. ಹಾಗಾಗಿ ಕೆಲವು ಮಿತಿ, ನಿಬಂಧಗಳನ್ನು ಹಾಕಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನಗರದಲ್ಲಿ ಮಾತನಾಡುತ್ತಾ ಫ್ರೀ ವಿದ್ಯುತ್ (Electricity) ವಾರ್ಷಿಕ ಸರಾಸರಿ ಲೆಕ್ಕಕ್ಕೆ ಬಿಜೆಪಿ ಟೀಕೆ ಸಂಬಂಧ ಪ್ರತಿಕ್ರಿಯಿಸಿ ವಾರ್ಷಿಕ ಸರಾಸರಿ ಲೆಕ್ಕ ಸಮರ್ಥಿಸಿಕೊಂಡರು. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ವರ್ಷದಲ್ಲಿ ಬಳಸಿದ ವಿದ್ಯುತ್ ನ ಸರಾಸರಿ ಮೇಲೆ ನಾವು ಚಾರ್ಜ್ ಹಾಕ್ತೇವೆ. ಇಲ್ಲ 200 ಯೂನಿಟ್ (200 Unit) ಹೇಳಿದ್ದೀರಿ ಅಷ್ಟೇ ಕೊಡಿ ಅಂತಿದ್ದಾರೆ ಎಂದರು. ಇದನ್ನೂ ಓದಿ: ಚುನಾವಣೆ ವೇಳೆ ಸೌಲಭ್ಯ ನೀಡಿ ಬಳಿಕ ಸ್ಥಗಿತ – ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ಕೂಡಿ ಹಾಕಿದ ಗ್ರಾಮಸ್ಥರು
ಎಷ್ಟು ವಿದ್ಯುತ್ ಬಳಸ್ತಿದಾರೋ ಅಷ್ಟೇ ಬಳಸಬೇಕು. ಹೆಚ್ಚು ಬಳಸಿದರೆ ದುಂದು ವೆಚ್ಚ ಆಗುತ್ತೆ. ಮನುಷ್ಯನಿಗೆ ವಿವೇಕ ಇರಬೇಕು. ನಾವೂ ಬದುಕಬೇಕು, ಸಮಾಜದಲ್ಲಿರೋರೂ ಬದುಕಬೇಕು. ಹಾಗಾಗಿ ಕೆಲವು ಮಿತಿಗಳನ್ನು ಹಾಕಬೇಕಾಗುತ್ತದೆ ಎಂದು ಸರಾಸರಿ ವಿದ್ಯುತ್ ಮೇಲಿನ ಉಚಿತ ವಿದ್ಯುತ್ ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ (BJP) ನಾಯಕರಿಗೆ ಕೌಂಟರ್ ಕೊಟ್ಟರು.