ಬೀಜಿಂಗ್: ಇಂಟರ್ನೆಟ್ ಸ್ಲೋ ಆಗಿದೆ ಎಂದು ಕೋಪಗೊಂಡು ಕೇಬಲ್‌ಗಳಿಗೆ ಬೆಂಕಿ ಹಚ್ಚಿದ ವ್ಯಕ್ತಿಗೆ ಏಳು ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಲ್ಯಾನ್ ಎಂಬ ವ್ಯಕ್ತಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಈತ ದಕ್ಷಿಣ ಗುವಾಂಗ್‌ಕ್ಸಿ ಪ್ರಾಂತ್ಯದ ಇಂಟರ್ನೆಟ್ ಕೆಫೆಯಲ್ಲಿದ್ದಾಗ, ಇಂಟರ್ನೆಟ್ ಸಂಪರ್ಕದಲ್ಲಿ ಸಮಸ್ಯೆಯಾಗಿತ್ತು. ಇಂಟರ್ನೆಟ್ ನಿಧಾನವಾಗಿ ಕೆಲಸ ಮಾಡುತ್ತಿತ್ತು. ಇದನ್ನೂ ಓದಿ: ಕುಡಿದು ಬಂದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ!
Advertisement
ಈತ ಲೈಟರ್ ಬಳಸಿ ಆಪ್ಟಿಕಲ್ ಫೈಬಲ್ ನೆಟ್‌ವರ್ಕ್ ಕೇಬಲ್‌ಗಳನ್ನು ಹೊಂದಿರುವ ಪೆಟ್ಟಿಗೆಗೆ ಬೆಂಕಿ ಹಚ್ಚಿದ್ದಾನೆ ಎಂದು ಸ್ಥಳೀಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸಾರ್ವಜನಿಕ ದೂರಸಂಪರ್ಕ ಸೌಲಭ್ಯಗಳನ್ನು ಸೌಲಭ್ಯಗಳನ್ನು ನಾಶಪಡಿಸಿದ್ದಕ್ಕಾಗಿ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ನೀಡಲಾಗಿದೆ.
Advertisement
Advertisement
ಈತನ ಕೃತ್ಯದಿಂದಾಗಿ 4,000 ಮನೆಗಳು ಮತ್ತು ಕಚೇರಿಗಳು, ಸಾರ್ವಜನಿಕ ಆಸ್ಪತ್ರೆಗೆ ಇಂಟರ್ನೆಟ್ ಸಮಸ್ಯೆ ತಲೆದೋರಿದೆ. ಸುಮಾರು 28ರಿಂದ 50 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತದಿಂದ ಸ್ಥಳೀಯರಿಗೆ ತೊಂದರೆಯಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದನ್ನೂ ಓದಿ: ಜಡ್ಜ್ ಭೇಟಿ ವೇಳೆ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್