ಬೆಂಗಳೂರು: ರಾಜ್ಯದಲ್ಲಿ ಧ್ವಜ ದಂಗಲ್ ತೀವ್ರಗೊಂಡಿರುವ ಹೊತ್ತಲ್ಲಿಯೇ ವಿಧಾನಮಂಡಲ ಅಧಿವೇಶನ ಶುರುವಾಗಿದೆ.
ಮೊದಲ ದಿನವಾದ ಇಂದು ಜಂಟಿ ಅಧಿವೇಶನದಲ್ಲಿ ಕೇಸರಿಧಾರಿ ಬಿಜೆಪಿಗರು ಜೈಶ್ರೀರಾಮ್ (Jai Shri Ram) ಘೋಷಣೆ ಮೊಳಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರು ಭಾರತ್ ಮಾತಾಕಿ ಜೈ, ಜೈ ಭೀಮ್ (Jai Bheem) ಎಂಬ ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಪಾಲರು ಭಾಷಣ ಮುಗಿಸುವಾಗ ಬೋಲೋ ಭಾರತ್ ಮಾತಾಕಿ ಜೈ ಅಂದ್ರು. ಆಗ ಎಲ್ರೂ ಭಾರತ್ ಮಾತಾಕಿ ಜೈ ಎಂದ್ರು.
ಈ ಬೆನ್ನಲ್ಲೇ ಬಿಜೆಪಿ ಶಾಸಕರು ಜೈಶ್ರೀರಾಮ್ ಎಂದು ಮೂರ್ನಾಲ್ಕು ಬಾರಿ ಕೂಗಿದ್ರು. ಆಗ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು, ಭಾರತ್ ಮಾತಾಕಿ ಜೈ, ಜೈ ಭೀಮ್, ಜೈ ಬಸವಣ್ಣ ಎಂಬ ಘೋಷಣೆ ಮೊಳಗಿಸಿದ್ರು. ಇದಕ್ಕೂ ಮುನ್ನ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಸದನಕ್ಕೆ ಬಂದ್ರು. ಜೈಶ್ರೀರಾಮ್ ಎನ್ನುತ್ತಲೇ ಂದು ಘೋಷಣೆ ಮಾಡುತ್ತಲೇ ಮೊಗಸಾಲೆ ಪ್ರವೇಶಿಸಿದ್ರು.
ಈ ವೇಳೆ ಅಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕ ಗಣಿಗ ರವಿಗೆ ಮಾಜಿ ಮಂತ್ರಿ ಮುನಿರತ್ನ (Muniratna) ಕೇಸರಿ ಶಾಲು ಹಾಕಿದ್ರು. ಇದಕ್ಕೆ ಗಣಿಗ ರವಿ ಆಕ್ಷೇಪಿಸಲಿಲ್ಲ. ಕೇಸರಿ ಶಾಲಿನೊಂದಿಗೆ ಮೊಗಸಾಲೆಗೆ ತೆರಳಿದ್ರು. ಆದ್ರೆ, ಎಸ್‍ಟಿ ಸೋಮಶೇಖರ್ ಮಾತ್ರ ಕೇಸರಿ ಶಾಲು ಹಾಕಿಕೊಳ್ಳಲಿಲ್ಲ.. ಇದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯ್ತು.ಬಿಜೆಪಿಗರ ಕೇಸರಿ ರಾಜಕೀಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಎಂದಿನ ಶೈಲಿಯಲ್ಲಿ ಕೌಂಟರ್ ನೀಡಿದ್ರು.