ಗಾಂಧಿನಗರ: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ (Jaguar Fighter Aircraft ) ಪತನಗೊಂಡು ಒಬ್ಬ ಪೈಲಟ್ ಗಾಯಗೊಂಡಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿರುವ ಘಟನೆ ಗುಜರಾತ್‌ನ (Gujarat) ಜಾಮ್‌ನಗರದಲ್ಲಿ (Jamnagar) ನಡೆದಿದೆ.
#WATCH | Gujarat | Visuals from Jamnagar where a Jaguar fighter aircraft crashed; one pilot rescued, operations underway to rescue the other pilot pic.twitter.com/fGsKY0B0pq
— ANI (@ANI) April 2, 2025
ವಿಮಾನ ಅಪಘಾತಕ್ಕೀಡಾದ ನಂತರ ಬೆಂಕಿ ಹೊತ್ತಿಕೊಂಡಿದೆ. ವಿಮಾನ ಪತನಗೊಂಡ ಬಗ್ಗೆ ರಾತ್ರಿ 9:50ರ ಸುಮಾರಿಗೆ ಮಾಹಿತಿ ದೊರೆಯಿತು. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಕಾಣೆಯಾದ ಪೈಲಟ್‌ಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ಪ್ರೇಮ್‌ಸುಖ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮನೆ ಪಾರ್ಕಿಂಗ್‌ಗೂ ಟ್ಯಾಕ್ಸ್
ಘಟನೆಯಲ್ಲಿ ಯಾವುದೇ ಸ್ಥಳೀಯರಿಗೆ ಗಾಯಗಳಾಗಿಲ್ಲ. ವಿಮಾನ ತೆರೆದ ಮೈದಾನದಲ್ಲಿ ಪತನಗೊಂಡ ಕಾರಣ ದೊಡ್ಡ ಅನಾಹುತ ತಪ್ಪಿದೆ. ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Andhra Pradesh | ಹಕ್ಕಿಜ್ವರಕ್ಕೆ 2 ವರ್ಷದ ಹೆಣ್ಣು ಮಗು ಬಲಿ