ಬೆಂಗಳೂರು: ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ, ವಿದ್ಯೆ ದಾನಕ್ಕಾಗಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ ಆರ್‌ಎಸ್‌ಎಸ್ . ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥಸೇವೆ ಮಾಡುವ ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಸ್ಥೆ ಎಂದರೆ ಅದು ಒಂದೇ ಆರ್‌ಎಸ್‌ಎಸ್ ಎಂದು ನಟ, ಬಿಜೆಪಿ ಮುಖಂಡ ನವರಸ ನಾಯಕ ಜಗ್ಗೇಶ್, ಎಚ್.ಡಿ ಕುಮಾರಸ್ವಾಮಿ ಅವರಿಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.
Advertisement
ಆರ್‌ಎಸ್‌ಎಸ್ ನಿಂದ 4 ಸಾವಿರ ಐಎಎಸ್, ಐಪಿಎಸ್ ಗಳಿಗೆ ಟ್ರೈನಿಂಗ್ ಎಂಬ ಎಚ್‍ಡಿಕೆ ಆರೋಪ ವಿಚಾರವಾಗಿ ಟ್ವೀಟ್ ಮಾಡಿರುವ ಜಗೇಶ್, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನನ್ನು ಸೋಲಿಸಿದ್ದು ಮೋದಿ, ಶಾ, ಆರ್‌ಎಸ್‌ಎಸ್: ಖರ್ಗೆ
Advertisement
ನಾನು ಕಂಡ ಅರ್ ಎಸ್ ಎಸ್
ॐ†☪︎
ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ????
ಕೊರೋನ ಸಂದರ್ಭವಾಗಲಿ,
ನೆರೆಬಂದ ಸಂದರ್ಭವಾಗಲಿ
ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ,ವಿಧ್ಯೆ ದಾನಕ್ಕಾಗಲಿ,ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥಸೇವೆ ಮಾಡುವ ಮಾತೃಹೃದಯಿ ಸಂಸ್ಥೆ ಎಂದರೆ ಅದು ಒಂದೆ ಆರ್ ಎಸ್ ಎಸ್..
ಯಾರಿಗೆ
— ನವರಸನಾಯಕ ಜಗ್ಗೇಶ್ (@Jaggesh2) October 6, 2021
Advertisement
ಟ್ವೀಟ್‍ನಲ್ಲಿ ಏನಿದೆ?:
ಆರ್‌ಎಸ್‌ಎಸ್ ಸಂಪರ್ಕ ದೊರಕಿದರೆ ಅಂಥವರು ತಮಗರಿಯದೆ ಸಾತ್ವಿಕನಾಗಿ ಸ್ವಾರ್ಥಬಿಟ್ಟು ಸಮಾಜಕ್ಕೆ ಹೆಗಲುಕೊಡುವ ಕರ್ಮಯೋಗಿ ಆಗುತ್ತಾನೆ. ದೂರನಿಂತು ಬೆಟ್ಟ ನೋಡುವರಿಗು ಆ ಬೆಟ್ಟ ಏರಿದವರು ಕೊಡುವ ವಿವರಣೆಗೆ ವ್ಯೆತಾಸವಿದೆ. ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು. ಕಾರಣ ಅದರ ಮಾತೃರೂಪ ಹಾಗೂ ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥವಾಗಿದೆ. ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿದ್ಯಾವಂತರು ರಾಷ್ಟ್ರಪ್ರೇಮಿಗಳು, ಆತ್ಮಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು. ಅವರಿಗೆ ದೇಶವೇ ಮನೆ ದೇಶವಾಸಿಗಳೇ ಬಂಧುಗಳು ಅವರ ನಿಸ್ವಾರ್ಥ ಸಮಾಜಸೇವೆಯೇ ದೇವರ ಪೂಜೆ. ಆ ಸಂಘದ ಬಗ್ಗೆ ಮಾತಾಡುವ ಮುನ್ನ ಅದರ ನಿಸ್ವಾರ್ಥಗುಣ ಅರಿಯಿರಿ ಎಂದು ಪರೋಕ್ಷವಾಗಿ ಎಚ್‍ಡಿಕೆಗೆ ಜಗ್ಗೇಶ್ ಟಾಂಕ್ ನೀಡಿದ್ದಾರೆ. ಇದನ್ನೂ ಓದಿ: ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!
Advertisement