ಪುನೀತ್ ರಾಜ್ ಕುಮಾರ್ ನೆನಪಿನ ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕೆ ನಟ ಜಗ್ಗೇಶ್ (Jaggesh) ಕೂಡ ಹಾಜರಿರಲಿಲ್ಲ. ಅಪ್ಪು ಮತ್ತು ಡಾ.ರಾಜ್ ಕುಟುಂಬದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದ ಜಗ್ಗೇಶ್, ಈ ಕಾರ್ಯಕ್ರಮಕ್ಕೆ ಗೈರು (absent) ಹಾಜರಿದ್ದದ್ದು ಪುನೀತ್ ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು. ಆ ಬೇಸರವನ್ನು ಕೆಲವರು ಹಂಚಿಕೊಂಡಿದ್ದರು. ಅದಕ್ಕೆ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಅವರು ಬರೆದುಕೊಂಡಿದ್ದಾರೆ.
Advertisement
ನನ್ನ ಬದುಕಿಗೆ ಪುನೀತ್ ಬದಲಾವಣೆಯ ಮಾರ್ಗದರ್ಶನದ ಬೆಳಕಾದ. ನನ್ನಲ್ಲಿದ್ದ ಕೋಪ, ಆವೇಶ ನಿರ್ನಾಮವಾಯಿತು. ಒಟ್ಟಿನಲ್ಲಿ ಪುನೀತ ನನಗೆ ಗುರವಾದ. ಅಮೆರಿಕಾದಿಂದ (America) ಹಿಂದಿರುಗುವ ಟಿಕೆಟ್ಟು ಸಿಗದೆ ಆತನ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲವೆಂದು ವಿಪರೀತ ದುಃಖವಾಯಿತು. ಅಪ್ಪನ ಹೆಸರಿನ ಗಂಧದಗುಡಿ ಚಿತ್ರ ಮತ್ತೊಮ್ಮೆ ಪುನೀತನಿಂದ ಕೊನೆಯ ಚಿತ್ರವಾಗಿ ಹೊರ ಬರುತ್ತಿದೆ. ಆ ಚಿತ್ರಕ್ಕೆ ನನ್ನ ಹೃದಯಪೂರ್ವಕ ಶುಭಕಾಮನೆಗಳು. ಎಲ್ಲರೂ ಒಂದು ದಿನ ಕಡ್ಡಾಯ ನಿರ್ಗಮಿಸಲೇಬೇಕು. ಆದರೆ, ಕೆಲವರು ಮಾತ್ರ ನಿರ್ಗಮಿಸಿದ ಮೇಲೆಯೂ ಉಳಿಯುತ್ತಾರೆ. ಆ ಕೆಲವರಲ್ಲಿ ಪುನೀತ್ (Puneeth Rajkumar) ನಮ್ಮಗಳಿಗೆ ದೇವರಾದ. ನಿನ್ನ ಪ್ರೀತಿಯ ನೆನಪು ನನ್ನ ಕೊನೆ ಉಸಿರಿನವರೆಗೂ ನನ್ನ ಮಾನಸದಲ್ಲಿ’ ಎಂದು ಭಾವನಾತ್ಮಕವಾಗಿ ಜಗ್ಗೇಶ್ ಬರೆದಿದ್ದಾರೆ. ಇದನ್ನೂ ಓದಿ:ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್
Advertisement
Advertisement
ನಿನ್ನೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.
Advertisement
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.