ನಿನ್ನೆಯಷ್ಟೇ ಜಗ್ಗೇಶ್ ನಟನೆಯ ‘ತೋತಾಪುರಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ತುಂಬಾ ಬರೀ ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿಕೊಂಡಿವೆ. ಇಂತಹ ಸಿನಿಮಾವನ್ನು ಕುಟುಂಬ ಸಮೇತ ನೋಡುವುದಕ್ಕೆ ಆಗುತ್ತಾ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ನಿರ್ದೇಶಕ ವಿಜಯ್ ಪ್ರಸಾದ್ ಅವರ ಬಹುತೇಕ ಸಿನಿಮಾಗಳ ಡೈಲಾಗ್ ಹಾಗೆಯೇ ಏಕೆ ಎನ್ನುವ ಪ್ರಶ್ನೆಯೂ ಪತ್ರಿಕಾಗೋಷ್ಠಿಯಲ್ಲಿ ತೂರಿ ಬಂತು. ಅದಕ್ಕೆ ಜಗ್ಗೇಶ್ ಮಾರ್ಮಿಕವಾಗಿಯೇ ಸಮರ್ಥನೆ ನೀಡಿರು. ಇದನ್ನೂ ಓದಿ : ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರ
Advertisement
ತೋತಾಪುರಿ ಒಂದೊಳ್ಳೆ ಸಿನಿಮಾ. ಆ ಡೈಲಾಗ್ ಕೇಳಿದಾಗ ಸಹಜವಾಗಿ ಡಬಲ್ ಮೀನಿಂಗ್ ಅನಿಸತ್ತೆ. ನಾವ್ಯಾರು ಆ ರೀತಿ ಮಾತೇ ಆಡಲ್ಲವಾ? ಮಾಯಮಂತ್ರದಿಂದ ಹೆಂಡತಿ ನೋಡಿದ್ರೆ ಮಕ್ಕಳ ಆಗತ್ತಾ? ನಾವ್ಯಾರು ಮಕ್ಕಳ ಮಾಡಲ್ವಾ?’ ಎಂದು ಡಬಲ್ ಮೀನಿಂಗ್ ನಲ್ಲೇ ಉತ್ತರಿಸಿದರು ಜಗ್ಗೇಶ್. ಈ ಸಿನಿಮಾದಲ್ಲಿ ಅದ್ಭುತವಾದ ಸಂದೇಶವಿದೆ. ಅದನ್ನು ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದರು ಜಗ್ಗೇಶ್. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ
Advertisement
Advertisement
ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಎರಡನೇ ಸಿನಿಮಾವಿದು. ಈ ಹಿಂದೆ ರಿಲೀಸ್ ಆಗಿದ್ದ ನೀರ್ ದೋಸೆ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಮತ್ತೇ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾ ಕೊಡಲಿದ್ದಾರೆ ಎನ್ನುವ ಸೂಚನೆ ಕೊಡುವಂತಿದೆ ರಿಲೀಸ್ ಆಗಿರುವ ಟ್ರೈಲರ್. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ
Advertisement
ಹಿಂದೂ ಮುಸ್ಲಿಂ ಕಥೆಯನ್ನು ಸಿನಿಮಾಗಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದು, ಭಾವಕ್ಯತೆಗೆ ಹೇಳಿ ಮಾಡಿಸಿದ ಸಿನಿಮಾ ಎನ್ನಲಾಗುತ್ತಿದೆ. ಎಲ್ಲಿಯೂ ಕೋಮಗಲಭೆ ಆಗುವಂತಹ ಒಂದೇ ಒಂದು ದೃಶ್ಯವನ್ನೂ ಸಿನಿಮಾದಲ್ಲಿ ಬಳಸಿಲ್ಲವಂತೆ. ಇಡೀ ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಿದೆ ಎನ್ನುತ್ತಾರೆ ನಿರ್ದೇಶಕರು. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?
ಕೆ.ಎ.ಸುರೇಶ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಜಗ್ಗೇಶ್ ಜತೆ ಡಾಲಿ ಧನಂಜಯ್, ಹೇಮಾ ದತ್ತ್, ಅದಿತಿ ಪ್ರಭುದೇವ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಎರಡು ಪಾರ್ಟ್ ನಲ್ಲಿ ಮೂಡಿ ಬಂದಿದೆ. ಮೊದಲನೇ ಭಾಗ ಅತೀ ಶೀಘ್ರದಲ್ಲೇ ರಿಲೀಸ್ ಮಾಡಲಿದ್ದಾರಂತೆ ನಿರ್ಮಾಪಕರು.