ನೀವು ಹೆಚ್ಚು ಮಸಾಲೆ ದೋಸೆ, ಸೆಟ್ ದೋಸೆ ಈರುಳ್ಳಿ ದೋಸೆ ಮಾಡುತ್ತೇವೆ. ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು. ಫಟ್ ಅಂತ ತಯಾರಾಗುವ ಈ ಸರಳ ದೋಸೆ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ ಹಿಟ್ಟು- 1 ಕಪ್
* ಗೋಧಿ ಹಿಟ್ಟು- 2 ಕಪ್
* ಬೆಲ್ಲದ ಪುಡಿ- ಕಪ್
* ತೆಂಗಿನ ತುರಿ – ಅರ್ಧ ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಸೋಡ- ಸ್ವಲ್ಪ
* ತುಪ್ಪ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪಾತ್ರೆಯೊಂದಕ್ಕೆ ಬೆಲ್ಲವನ್ನು ಹಾಕಿ, ಕಾಯಿಸಿ ಶೋಧಿಸಿಟ್ಟುಕೊಂಡಿರಬೇಕು.
* ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು, ಅಡುಗೆ ಸೋಡ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
Advertisement
* ನಂತರ ದೋಸೆ ಮಿಶ್ರಣಕ್ಕೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ತವಾವನ್ನು ಬಿಸಿ ಮಾಡಿ ದೋಸೆ ಆಕಾರದಲ್ಲಿ ಮಿಶ್ರಣವನ್ನು ಹಾಕಿ ಬೇಯಿಸಿದರೆ ರುಚಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ.