ಹೈದರಾಬಾದ್: ಆಂಧ್ರ ಪ್ರದೇಶದ ವೈಎಸ್‍ಆರ್ ಕಾಂಗ್ರೆಸ್ ಶಾಸಕ ಹಾಗೂ ಪಕ್ಷದ ಮುಖ್ಯಸ್ಥರೊಬ್ಬರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ ಭವ್ಯವಾದ ದೇವಸ್ಥಾನವೊಂದನ್ನು ನಿರ್ಮಿಸಿದ್ದಾರೆ.
Advertisement
ವೈಎಸ್‌ಆರ್‌ಪಿಸಿಯ ಶಾಸಕ ಬಿ. ಮಧುಸೂಧನ್ ರೆಡ್ಡಿ ತಮ್ಮ ಗೌರವವನ್ನು ಪ್ರದರ್ಶಿಸಲು ಮತ್ತು ಸರ್ಕಾರದ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಿರುವುದಾಗಿ ತಿಳಿಸಿದ್ದು, ಈ ದೇವಾಲಯವನ್ನು ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ತಜ್ಞರು ವಿನ್ಯಾಸಗೊಳಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ
Advertisement
Advertisement
ಚಿತ್ತೂರು ಜಿಲ್ಲೆಯ ಶ್ರೀಕಳಹಸ್ತಿ ಪಟ್ಟಣದಲ್ಲಿ ಬುಧವಾರ ಆಂಧ್ರಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ನಿರ್ಮಿಸಲಾದ ನವರತ್ನಲು ದೇವಾಲಯವನ್ನು ಉದ್ಘಾಟಿಸಲಾಯಿತು. ‘ಜಗನಣ್ಣ ನಾರತ್ನಳ ನಿಲಯಂ’ ಎಂದು ಕರೆಯಲ್ಪಡುವ ದೇವಾಲಯದಲ್ಲಿ 9 ಸ್ತಂಭಗಳಿವೆ. ಇದು ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿರುವ ಒಂಬತ್ತು ಕಲ್ಯಾಣ ಯೋಜನೆಗಳನ್ನು ಸೂಚಿಸುತ್ತದೆ. ಈ ಕುರಿತಂತೆ ಬಿ. ಮಧುಸೂಧನ್ ರೆಡ್ಡಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನಮ್ಮ ಜಗನ್ನಣ್ಣ, ಬಡ ಜನರ ಕುಟುಂಬಗಳಿಗೆ ಸಂತಸ ತರುವ ದೇವರು ಎಂದು ಹೇಳಿದ್ದು, ಹೊಸದಾಗಿ ನಿರ್ಮಿಸಲಾಗಿರುವ ದೇವಾಲಯದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ
Advertisement
ಮನೆಯ ಮೇಲ್ಭಾಗದ ಮಿರರ್ ಹಾಲ್‍ನಲ್ಲಿ ಜಗನ್ ಮೋಹನ್ ರೆಡ್ಡಿಯವರ ಪ್ರತಿಮೆ ಹಾಗೂ ಫೋಟೋಗಳನ್ನು ಇಡಲಾಗಿದೆ. ಇದು ಆಗಸ್ಟ್ 20ರಂದು ಉದ್ಘಾಟನೆಯಾಗಲಿದೆ. ಅಲ್ಲದೇ ಕೇಂದ್ರ ಫಲಕವನ್ನು ಆಂಧ್ರಪ್ರದೇಶದ ನಕ್ಷೆಯೊಂದಿಗೆ ಕೆತ್ತಲಾಗಿದೆ. ಜೊತೆಗೆ ಜಗನ್ ರೆಡ್ಡಿ, ವೈಎಸ್‌ಆರ್‌ಪಿಸಿಯ ಧ್ವಜ ಮತ್ತು ಪಕ್ಷದ ಚಿಹ್ನೆ ನವ ರತ್ನಗಳನ್ನು ಬೆಳ್ಳಿ ಹಾಗೂ ಚಿನ್ನದಿಂದ ಮಾಡಲ್ಪಟ್ಟಿದೆ. ದೇವಾಲಯಕ್ಕೆ ಭೇಟಿ ನೀಡುವವರಿಗೆ ಜಗನ್ ಮೋಹನ್ ರೆಡ್ಡಿ ಮಾಡಿದ ಕಲ್ಯಾಣ ಯೋಜನೆಗಳ ತಿಳಿಸುವ ಕಿರು ಪುಸ್ತಕವನ್ನು ನೀಡಲಾಗುತ್ತದೆ ಎಂದಿದ್ದಾರೆ.
“జగనన్న నవరత్నాలు నిలయం” pic.twitter.com/piFTZRWOVR
— Biyyapu MadhuSudhan Reddy – MLA (@BiyyapuMadhu) August 16, 2021
ಅನೇಕರು ನಾನು ಜಗನ್ ಮೋಹನ್ ರೆಡ್ಡಿಯವರು ನಾರತ್ನಳ ನಿಲಯವನ್ನು ಏಕೆ ಕಟ್ಟಿದ್ದೇನೆ ಎಂದು ಟೀಕಿಸಬಹುದು. ಆದರೆ ಬ್ರಿಟಿಷರ ಪ್ರತಿಮೆಗಳನ್ನು ಗೋದಾವರಿ ನದಿಯ ಅಣೆಕಟ್ಟಿನಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಜನರಿಗೆ ಒಳ್ಳೆಯದನ್ನು ಮಾಡುವ ವ್ಯಕ್ತಿಯ ಪ್ರತಿಮೆಯನ್ನು ನಿರ್ಮಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
“జగనన్న నవరత్నాలు నిలయం” pic.twitter.com/RPsRlKZeTj
— Biyyapu MadhuSudhan Reddy – MLA (@BiyyapuMadhu) August 16, 2021
ಜಗನ್‍ರವರು ಜಾರಿಗೊಳಿಸಿರುವ ನವ ರತ್ನಗಳ ಯೋಜನೆ ರಾಜ್ಯದ ಆರು ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಜನರಿಗೆ ಪ್ರಯೋಜನವಾಗುತ್ತಿದೆ. ಇಂತಹ ಬೃಹತ್ ಯೋಜನೆ ಭಾರತದಲ್ಲಿ ಎಲ್ಲಿಯೂ ಇಲ್ಲ. ಅದಕ್ಕಾಗಿಯೇ ನಾನು ಇದನ್ನು ನಿರ್ಮಿಸಿದ್ದೇನೆ ಎಂದು ತನ್ನ ಕೆಲಸವನ್ನು ಮಧುಸೂಧನ್ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್
TOP HACK: How to please your boss? Build A Temple! Srikalahasti MLA Biyyapu Madhusudhan Reddy has builds a ‘Jagan Reddy Temple’ spending TWO CRORE rupees. Idols with Gold, Silver! Family idols and whatnot. Outright silly & absurd pic.twitter.com/QsCf96FSUt
— Revathi (@revathitweets) August 17, 2021