LatestMain PostNational

ಚಂದ್ರಬಾಬು ನಾಯ್ಡು ಕ್ಷೇತ್ರದಿಂದ ಜಗನ್ ಸ್ಪರ್ಧೆ – 2 ವರ್ಷಕ್ಕೂ ಮುನ್ನ ರಂಗೇರಿದ ಚುನಾವಣಾ ರಾಜಕೀಯ

Advertisements

ಹೈದರಾಬಾದ್: ಆಂಧ್ರಪ್ರದೇಶ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಅಖಾಡ ಸಿದ್ಧವಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಹಾಲಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಕಾಂಗ್ರೆಸ್ ನಾಯಕರ ಜೊತೆಗೆ ನಡೆಸಿದ ಸಭೆ ಬಳಿಕ ಜಗನ್ ಮೋಹನ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ. ಮುಂಬರುವ ಚುನಾವಣಾ ಕದನವು ಚಂದ್ರಬಾಬು ನಾಯ್ಡು ಕ್ಷೇತ್ರ ಕುಪ್ಪಂನಿಂದಲೇ ಆರಂಭವಾಗುತ್ತದೆ. ನಾಯ್ಡು ಅವರನ್ನು ಸಂಪೂರ್ಣವಾಗಿ ಹೊರ ಹಾಕುವುದು ನಮ್ಮ ಗುರಿ. ಇದಕ್ಕಾಗಿ ಕಾರ್ಯಕರ್ತರು ಸಿದ್ಧವಾಗಬೇಕು ಎಂದು ಜಗನ್ ಕರೆ ಕೊಟ್ಟಿದ್ದಾರೆ.

Chandrababu Naidu

1989 ರಿಂದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಚಂದ್ರಬಾಬು ನಾಯ್ಡು ಪ್ರತಿನಿಧಿಸುತ್ತಿದ್ದಾರೆ. 2019 ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳನ್ನು ಗಳಿಸಿ, ಟಿಡಿಪಿಯನ್ನು 23 ಕ್ಕೆ ಇಳಿಸಿತು. ನಾಯ್ಡು ಅವರ ಮತಗಳು ಇಲ್ಲಿ ಮೊದಲ ಬಾರಿಗೆ ಶೇ.60 ಕ್ಕಿಂತ ಕಡಿಮೆ ಅಂದರೆ ಶೇ.55.18 ಕ್ಕೆ ಕುಸಿದಿತ್ತು. ವೈಎಸ್‌ಆರ್‌ಸಿಪಿಯ ಅಭ್ಯರ್ಥಿ ಕೆ ಚಂದ್ರಮೌಳಿ ಶೇ.38 ರಷ್ಟು ಮತಗಳನ್ನು ಪಡೆದಿದ್ದರು. ಜನಸೇನೆ ಮತ್ತು ಬಿಜೆಪಿಯಿಂದ ನಾಯ್ಡು ಮತಗಳು ಕಡಿಮೆಯಾಗಿದ್ದು ಈ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ವೈಎಸ್‌ಆರ್‌ಸಿಪಿಯಿಂದ ತಾವು ಸ್ಪರ್ಧಿಸುವ ಮೂಲಕ ನಾಯ್ಡುಗೆ ಸೋಲಿನ ರುಚಿ ಕಾಣಿಸಲು ಜಗನ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಗೆ ಹಾಜರಾದ ಸಂಜಯ್ ರಾವತ್ ಪತ್ನಿ ವರ್ಷಾ

ಕುಪ್ಪಂ ಪುರಸಭೆ ವ್ಯಾಪ್ತಿಯಲ್ಲಿ ತಮ್ಮ ಸರ್ಕಾರ ಮಂಜೂರು ಮಾಡಿರುವ 65 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಮ್ಮ ಸ್ವಂತ ಕ್ಷೇತ್ರವಾದ ಕಡಪಾದಲ್ಲಿರುವ ಪುಲಿವೆಂದುಲದಷ್ಟೇ ಕುಪ್ಪಂ ಅವರಿಗೆ ಮುಖ್ಯ ಎಂದು ಜಗನ್ ಹೇಳಿದ್ದಾರೆ.

cm jagan mohan reddy

ಕಳೆದ ವಿಧಾನಸಭೆ ಚುನಾವಣೆ ಬಳಿಕ ವೈಎಸ್‌ಆರ್‌ಸಿಪಿ ಬೆಳವಣಿಗೆ ಹೆಚ್ಚಿದ್ದು, ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿದೆ. ವೈಎಸ್‌ಆರ್‌ಸಿಪಿಯ ಬೆಳವಣಿಗೆಯಿಂದ ಕಾಂಗ್ರೆಸ್ ಹೀನಾಯವಾಗಿ, ರಾಜ್ಯದಲ್ಲಿ ಟಿಡಿಪಿ ಮಾತ್ರ ಪ್ರತಿಪಕ್ಷವಾಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ 175 ಸ್ಥಾನಗಳನ್ನೂ ಗೆಲ್ಲುವ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

Live Tv

Leave a Reply

Your email address will not be published.

Back to top button