– ಕೋಟಿಗೊಬ್ಬನಿಗೆ ಅಡ್ಡಗಾಲಾಗಿದ್ದೇ ಇಂಡಸ್ಟ್ರೀಯವರು
– ಸಿ. ಪುಟ್ಟಣ್ಣ ವಿರುದ್ಧ ಗರಂ ಆದ ಜಾಕ್ ಮಂಜು
ಬೆಂಗಳೂರು: ಆಯುಧ ಪೂಜೆ ದಿನ ತೆರೆಗೆ ಬರಲು ಸಿದ್ಧವಾಗಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ವಿತರಕರ ತೊಂದರೆಯಿಂದಾಗಿ ತೆರೆಗೆ ಬಂದಿರಲಿಲ್ಲ. ಇದಕ್ಕೆ ಕಾರಣ ಕನ್ನಡ ಸಿನಿಮಾ ಇಂಡಸ್ಟ್ರಿಯವರು. ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದವರು ಸುದೀಪ್ ಸಿನಿಮಾಗೆ ಸಮಸ್ಯೆ ಮಾಡಿದ್ದಾರೆ ಎಂದು ಸುದೀಪ್ ಆಪ್ತ ಜಾಕ್ ಮಂಜು ಆರೋಪಿಸಿದ್ದಾರೆ.
Advertisement
ಸಿನಿಮಾ ನಿನ್ನೆ ರಿಲೀಸ್ ಆಗ ಬೇಕಿತ್ತು ಆದರೆ ಆಗಿರಲಿಲ್ಲ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಟಿಗೊಬ್ಬ ಸಿನಿಮಾ ನಿಲ್ಲಿಸಿದವರು ಸ್ಯಾಂಡಲ್‍ವುಡ್‍ನವರೇ. ಕೆಲವು ರಾಜಕಾರಣಿಗಳು ಎಲೆಕ್ಷನ್ ಪ್ರಾಚಾರಕ್ಕೆ ಕರೆಯುತ್ತಾರೆ. ಕೆಲವರು ಸುದೀಪ್ ಅವರ ಮನೆಗೆ ಬಂದು ಅಣ್ಣಾ ಅಂತ ಫೋಟೋ ತೆಗೆಸಿಕೊಳ್ತಾರೆ. ಅವರೇ ಸುದೀಪ್ ಸಿನಿಮಾಗೆ ಥೇಟರ್ ಕೊಡ್ಬೇಡಿ ಅಂತ ಫೋನ್ ಮಾಡ್ತಾರೆ. ಕೋಟಿಗೊಬ್ಬ ಸಿನಿಮಾದ ವಿತರಕರಿಗೆ ಹಣ ಸಿಗದಂತೆ ಕಡೆಗಳಿಕೆಯಲ್ಲಿ ಕೆಲಸ ಮಾಡಿದ್ದಾರೆ ಸಿನಿಮಾ ರಿಲೀಸ್ ತಡವಾಗಿದ್ದರಿಂದ ಸುಮಾರು 10-12 ಕೋಟಿ ರೂ. ನಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್
Advertisement
Advertisement
ಕೆಲವು ನಿರ್ಮಾಪರು, ಸುದೀಪ್ ಅವರ ಸಿನಿಮಾ ಬಿಡುಗಡೆಗೆ ಸಮಸ್ಯೆ ಮಾಡಿದ್ದಾರೆ. ಜೊತೆಗೆ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡಿದ್ದ ಆರೋಪಿಗಳ ಪರವಾಗಿ ಪೊಲೀಸರಿಗೆ ಫೋನ್ ಮಾಡಿ ಬಿಡಿಸುವ ಕೆಲಸ ಎಂಎಲ್‍ಸಿ ಪುಟ್ಟಣ್ಣ ಅವರು ಮಾಡಿದ್ದಾರೆ. ಇದು ತಪ್ಪು. ಗಂಡಸಾಗಿದ್ರೆ ಒಳ್ಳೆ ರೀತಿಯಲ್ಲಿ ಬದುಕಿ, ಬದುಕಲು ಬಿಡಿ. ಈ ರೀತಿಯಲ್ಲಿ ಬದುಕಬೇಡಿ ಎಂದು ಜಾಕ್ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ
Advertisement
ಸುದೀಪ್ ಅವರು ಭೂಗತಪಾತಕಿಗಳ ಜೊತೆ ಸೇರಲ್ಲ. ಅವರಿಗೋಸ್ಕರ ಸಿನಿಮಾ ಮಾಡಲ್ಲ. ಕೆಲವು ರಾಜಕಾರಣಿಗಳ ಜೊತೆ ಸೇರಲ್ಲ. ಅವರೆಲ್ಲಾ ಒಟ್ಟಾಗಿ ಸೇರಿ ಈ ಷ್ಯಂಡ್ಯಂತ್ರ ಮಾಡಿದ್ದಾರೆ ಎಂದು ಜಾಕ್ ಮಂಜು ಗಂಭೀರ ಆರೋಪಮಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ