CinemaDistrictsKarnatakaLatestMain PostSandalwood

ಕೆಜಿಎಫ್ 2 ವಿವಾದ: ನಾಯಿ, ನರಿಗೆಲ್ಲ ಉತ್ತರ ಕೊಡಲ್ಲ ಎಂದ ನಿರ್ಮಾಪಕ ಜಾಕ್ ಮಂಜು

ಕೆಜಿಎಫ್ 2 ಸಿನಿಮಾಗೆ ಕಿಚ್ಚ ಸುದೀಪ್ ವಿಶ್ ಮಾಡಿಲ್ಲ ಎನ್ನುವ ವಿಚಾರ ಮತ್ತು ಕೆಜಿಎಫ್ ಸಿನಿಮಾದ ಪ್ರಶ್ನೆಗೆ ಸುದೀಪ್ ಕೊಟ್ಟಿರುವ ಉತ್ತರದ ವಿಡಿಯೋ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿನಿಂದಾಗಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡುವಂತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜತೆ ಮಾತನಾಡಿರುವ ನಿರ್ಮಾಪಕ ಮತ್ತು ಸುದೀಪ್ ಆಪ್ತರಾರ ಜಾಕ್ ಮಂಜು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ‘ಯಾರೋ ನಾಯಿ ನರಿಗೆಲ್ಲ ಉತ್ತರ ಕೊಡಲಿಕ್ಕೆ ಆಗದು’ ಎಂದು ಖಡಕ್ಕಾಗಿಯೇ ಅವರು ಉತ್ತರಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

KGF 2 Yash (4)

ಯಶ್ ನಟನೆಯ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಕ್ಷಿಣದ ಬಹುತೇಕ ತಾರೆಯರು ಮತ್ತು ಬಾಲಿವುಡ್ ಸಿನಿ ರಂಗ ಕೆಲವು ನಟ ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆದರೆ, ಕನ್ನಡದ ಕೆಲ  ನಟರು ಕೆಜಿಎಫ್ 2 ಸಿನಿಮಾದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ ಎನ್ನುವುದು ಹಲವು ಅಭಿಮಾನಿಗಳ ತಕರಾರು. ಅದಕ್ಕೆ ಗುರಿಯಾಗಿದ್ದು ಕಿಚ್ಚು ಸುದೀಪ್. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ನೆನ್ನೆಯಷ್ಟೇ ಸುದೀಪ್ ಅವರು ಎಂದೋ ಆಡಿದ  ಐದತ್ತು ಸೆಕೆಂಡುಗಳು ವಿಡಿಯೋ ಕ್ಲಿಪ್ ಅನ್ನು ಇಟ್ಟುಕೊಂಡು ಕಿಚ್ಚನ ಬಗ್ಗೆ ಸಲ್ಲದ ಕಾಮೆಂಟ್ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸುದೀಪ್ ಅವರ ಅಭಿಮಾನಿಗಳು ಕೂಡ ಕೌಂಟರ್ ಕಾಮೆಂಟ್ ನೀಡುತ್ತಿದ್ದಾರೆ. ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

ಸದ್ಯ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ನಲ್ಲಿ ಪತ್ರಕರ್ತರೊಬ್ಬರು ‘ಕೆಜಿಎಫ್’ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ‘ನಾನು ಆ ಸಿನಿಮಾದಲ್ಲಿ ಇಲ್ಲ’ ಎಂದಷ್ಟೇ ಚುಟುಕಾಗಿ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದನ್ನೇ ಹಿಡಿದುಕೊಂಡು ಕೆಲವರು ಕಿಚ್ಚನ ತೇಜೋವಧೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಸುದೀಪ್ ಅಭಿಮಾನಿಗಳು ಕೂಡ ಅಷ್ಟೇ ಖಡಕ್ಕಾಗಿಯೇ ಉತ್ತರ ನೀಡಿದ್ದು, ಈ ಹಿಂದೆ ಸುದೀಪ್ ಅವರು ಕೆಜಿಎಫ್ 1 ಸಿನಿಮಾ ರಿಲೀಸ್ ಆದಾಗ ಟ್ವಿಟ್ ಮಾಡಿರುವ ಸ್ಕ್ರೀನ್ ಶಾಟ್ ಹಾಕಿದ್ದಾರೆ ಅಲ್ಲದೇ ಈ ಹಿಂದೆ ಮತ್ತೊಬ್ಬ ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಸುದೀಪ್ ಶುಭ ಹಾರೈಸಿದಾಗ, ಆ ನಟ ನಡೆದುಕೊಂಡ ರೀತಿಯ ಕುರಿತು ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ನಟ. ಅವರಿಗೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಗೌರವ ಇಲ್ಲದೇ ಇರುವ ಕಡೆ ಸುದೀಪ್ ಇರುವುದಿಲ್ಲ. ಅದು ಅವರ ಗುಣ. ಪ್ರೀತಿಯಿಂದಲೇ ಎಲ್ಲರನ್ನೂ ಅವರು ಕಾಣುತ್ತಾರೆ. ಸುಮ್ಮನೆ ಕಲಾವಿದರ ಮಧ್ಯೆ ತಂದಿಡುವ ಕೆಲಸ ನಡೆಯುತ್ತಿದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ ಡಾ.ವಿಷ್ಣು ಸೇನಾಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್. ಅಲ್ಲದೇ ಅನೇಕರು ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. ಫ್ಯಾನ್ಸ್ ನಿಂದಾಗಿ ಕಲಾವಿದರಿಗೆ ಮುಜಗರ ಆಗಬಾರದು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published.

Back to top button