ರಾಯಪುರ: ಇಂಡೋ ಟಿಬೆಟಿಯನ್ ಗಡಿ ರೇಖೆಯ ಪೊಲೀಸರು(ಐಟಿಬಿಪಿ) ಗರ್ಭಿಣಿಯನ್ನು 5 ಕಿಮೀ ದೂರ ಹೆಗಲ ಮೇಲೆ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ ಘಟನೆ ಛತ್ತೀಸ್‍ಗಢದ ಕೊಂಡಾಗವ್ನ್ ಜಿಲ್ಲೆಯಲ್ಲಿ ನಡೆಸಿದೆ.
ಜಿಲ್ಲೆಯ ಹದೇಲಿ ಗ್ರಾಮದ ಸಹದಲಿ ಎಂಬ ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಸರಿಯಾದ ರಸ್ತೆ ಸಂಪರ್ಕ ಇಲ್ಲದ ಗ್ರಾಮಕ್ಕೆ ಅಂಬುಲೆನ್ಸ್ ಸೇವೆಯೂ ಲಭ್ಯವಿಲ್ಲದಾಗಿದೆ. ಇದೇ ವೇಳೆ ಈ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಟಿಬಿಪಿ 41ನೇ ಪಡೆಯ ಯೋಧರು ಮಹಿಳೆಯ ಸಹಾಯಕ್ಕೆ ಆಗಮಿಸಿದ್ದಾರೆ.
Advertisement
Another humanitarian effort by ITBP. A pregnant women Smt Sahdai of Hadeli village with labour pain evacuated on strecher by 41 Battalion in Distt Kondagaon in Chhattisgarh. Hadeli and Ranapal COBs jointly carried the lady on stretcher for 5 KMs to take her to PHC Mardapal pic.twitter.com/uSaRCIYrA1
— ITBP (@ITBP_official) August 12, 2018
Advertisement
ಈ ಕುರಿತ ವಿಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಘಟನೆಯ ಕುರಿತು ಮಾಹಿತಿ ನೀಡಿದೆ. ಮಾನವೀಯ ನೆಲೆಯ ಹಿನ್ನೆಲೆಯಲ್ಲಿ ಮಹಿಳೆಗೆ ಸಹಾಯ ಮಾಡಿದ್ದು, 5 ಕಿಮೀ ದೂರದ ಪಿಎಚ್‍ಸಿ ಮರ್ದಪಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಟ್ವೀಟ್ ನಲ್ಲಿ ಮಾಹಿತಿ ನೀಡಲಾಗಿದೆ.
Advertisement
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯೋಧರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ ಯಾವಾಗಲೂ ಯೋಧರೇ ಈ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ ಅದ್ದರಿಂದ ಹಳ್ಳಿಗಳಿಗೆ ಸಮಪರ್ಕ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹಲವರು ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Eel done Him Veers
You r winning hearts of those who really need care & support in those remote areas.
Providing sense of security through such civic work. https://t.co/WWhQsR1bba
— ???????? BN Sharma, IG (Retd) (@BholaNath_BSF) August 13, 2018
You fill us with pride and honour! ???????? https://t.co/gVjKSCFJfX
— slimer (@ansrvs) August 12, 2018