– ಆದಷ್ಟು ಬೇಗ ಜಾಮೀನು ಅರ್ಜಿ ಸಲ್ಲಿಸೋದಾಗಿ ಪತ್ನಿ ವಿಜಯಲಕ್ಷ್ಮಿ ಅಭಯ
ಬಳ್ಳಾರಿ: ಜೈಲಿನಲ್ಲಿ ಪದೇ ಪದೇ ದುರ್ನಡತೆ ತೋರುತ್ತಿದ್ದ ದಾಸನಿಗೆ ಪತ್ರ ಬರೆಯುವ ಮೂಲಕ ವಕೀಲರು ಪಾಠ ಕಲಿಸಿದ್ದು, ಇದೀಗ ದರ್ಶನ್ ಎಚ್ಚೆತ್ತುಕೊಂಡಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ಕೊಲೆ ಆರೋಪಿ ದರ್ಶನ್ ಪದೇ ಪದೇ ದುರ್ನಡತೆ ತೋರುತ್ತಿದ್ದ ಕಾರಣ ವರ್ತನೆ ಬದಲಾಯಿಸುವ ಕುರಿತು ವಕೀಲರು ಪತ್ರ ಬರೆದಿದ್ದರು. ಇದೀಗ ಆರೋಪಿ ದರ್ಶನ್ (Actor Darshan) ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್ ನಿರ್ಧಾರ
ವಕೀಲರು ದರ್ಶನ್‌ಗೆ ಬರೆದ ಪತ್ರದಲ್ಲಿ ಅನಗತ್ಯ ಕಿರಿಕ್ ಮಾಡಿಕೊಳ್ಳಬೇಡಿ. ಮಾಧ್ಯಮಗಳ ಮೇಲೆ ದುರ್ನಡತೆ ತೋರುವ ಕುರಿತು, ಜೈಲಿನಲ್ಲಿ ಕಿರಿ ಕಿರಿ ಮಾಡಬೇಡಿ. ವರ್ತನೆ ಬದಲಿಸಿಕೊಳ್ಳದಿದ್ದರೇ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತದೆ ಎಂದು ಉಲ್ಲೇಖಿಸಿದ್ದರು.
ಇದೇ ಕಾರಣಕ್ಕೆ ನಿನ್ನೆ (ಸೆ.17) ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿದ್ದರು. ಅವರ ಭೇಟಿಗೆ ಆರೋಪಿ ದರ್ಶನ್ ನಗು ನಗುತ್ತಾ ಸೆಲ್‌ನಿಂದ ಹೊರ ಬಂದಿದ್ದರು. ಪತ್ನಿ ಹಾಗೂ ಆಪ್ತರ ಭೇಟಿ ಬಳಿಕವೂ ನಗುತ್ತಲೇ ಸೆಲ್‌ಗೆ ಹೋಗಿದ್ದರು. ವಕೀಲರ ಪತ್ರ ತಲುಪಿದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ದರ್ಶನ್ ಜೈಲಿನಲ್ಲಿ ತಮ್ಮ ವರ್ತನೆ ಬದಲಾಯಿಸಿಕೊಂಡಿದ್ದಾರೆ.
ಇನ್ನೊಂದು ಕಡೆ ದರ್ಶನ್‌ಗೆ ಜಾಮೀನು ಚಿಂತೆಯಾಗಿದ್ದು, ಪತ್ನಿ ವಿಜಯಲಕ್ಷ್ಮಿಯವರು ಭೇಟಿಗೆ ಬಂದಾಗಲೂ ಜಾಮೀನು ವಿಚಾರವಾಗಿ ಚರ್ಚೆ ಮಾಡಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ದರ್ಶನ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳ ಬಗ್ಗೆ ದರ್ಶನ್ ಗಮನಕ್ಕೆ ತಂದಿದ್ದ ವಿಜಯಲಕ್ಷ್ಮಿ, ಏನೇ ಸಾಕ್ಷಿ ಸಿಕ್ಕಿದ್ದರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡುತ್ತಿದ್ದಾರೆ. ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ – ಅಕ್ಟೋಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಸಾಧ್ಯತೆ!
ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಎಲ್ಲಾ ಸಾಧಕ, ಬಾಧಕಗಳನ್ನು ನೋಡಿಕೊಂಡು ಜಾಮೀನಿಗೆ ಅರ್ಜಿ ಹಾಕುವುದಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರಗಳ ಕುರಿತು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅರ್ಧ ಗಂಟೆ ಚರ್ಚಿಸಿದ್ದಾರೆ.