ಮೈಸೂರು: ನಾನು ಬಹಳಷ್ಟು ಹೋಂ ವರ್ಕ್ ಮಾಡಿಯೇ ರಾಜಕಾರಣಕ್ಕೆ (Politics) ಬಂದಿದ್ದೇನೆ. ನನ್ನ ರಾಜಕೀಯ ಪ್ರವೇಶದ ಹಿಂದೆ ನನ್ನ ಪತ್ನಿಯ (Wife) ಕುಟುಂಬದ ಪಾತ್ರ ಇಲ್ಲ ಎಂದು ಮೈಸೂರು (Mysuru) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Wadiyar) ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನಗೆ ಬಿಜೆಪಿ (BJP) ಟಿಕೆಟ್ ಕೊಡಿಸಿದ್ದು ಪತ್ನಿಯ ಕುಟುಂಬದವರಲ್ಲ ಎಂದರು. ಇನ್ನು ಪ್ರತಾಪ್ ಸಿಂಹಗೆ (Pratap Simha) ಟಿಕೆಟ್ ತಪ್ಪಿರುವ ಬಗ್ಗೆ ಅವರಿಗೆ ನನ್ನ ಮೇಲೆ ಬೇಸರವಿಲ್ಲ. ಅವರೇ ಖುದ್ದಾಗಿ ನನ್ನ ಜೊತೆ ಮಾತನಾಡಿದ್ದಾರೆ. ಅವರು ಪ್ರಚಾರಕ್ಕೆ ಬರುತ್ತಾರೆ. ಅವರು ಮಾಡಿರೋ ಕೆಲಸದಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಹೇಳಿದರು. ಇದನ್ನೂ ಓದಿ: ನಾಳೆ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ
Advertisement
Advertisement
ನಮ್ಮ ಮೈಸೂರು ಮತ್ತು ಕೊಡಗು ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಇಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಸಂರಕ್ಷಣೆ ಮಾಡಬೇಕು ಹಾಗೂ ಅಧಿಕಾರದಲ್ಲಿದ್ದಾಗ ಜನರ ಸೇವೆ ಮಾಡಲು ಹೆಚ್ಚಿನ ಅವಕಾಶವಿದೆ. ಜನರ ನೀರೀಕ್ಷೆಯನ್ನು ನಾನು ಪೂರ್ತಿಮಾಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣಾ ಆಯುಕ್ತರಾಗಿ ನೇಮಕ; ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಅಧಿಕಾರ ಸ್ವೀಕಾರ
Advertisement