ರಾಹುಲ್‌ ಗಾಂಧಿ ಒಳ್ಳೆಯ ಸ್ಟ್ಯಾಂಡಪ್‌ ಕಾಮಿಡಿಯನ್‌ ಆಕ್ಟ್‌ ಮಾಡಿದ್ದಾರೆ: ಕಂಗನಾ ಲೇವಡಿ

Public TV
1 Min Read
KANGANA RANAUT

ನವದೆಹಲಿ: ರಾಹುಲ್‌ ಗಾಂಧಿ ಒಳ್ಳೆಯ ಸ್ಟ್ಯಾಂಡಪ್‌ ಕಾಮಿಡಿಯನ್‌ ಆಕ್ಟ್‌ (Standup Comedian Acting) ಮಾಡಿದ್ದಾರೆ ಎಂದು ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್‌ (Kangana Ranaut) ಲೇವಡಿ ಮಾಡಿದ್ದಾರೆ.

SPEAKER RAHUL GANDHI

ಲೋಕಸಭೆ ಮೊದಲ ದಿನದ ಅಧಿವೇಶನದ (Parliament Session) ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ರಾಹುಲ್‌ ಗಾಂಧಿ ಒಳ್ಳೆಯ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಆಕ್ಟ್‌ ಮಾಡಿದ್ದಾರೆ. ಏಕೆಂದರೆ ನಮ್ಮ ಎಲ್ಲಾ ದೇವಾನುದೇವತೆಗಳನ್ನ ಬ್ರಾಂಡ್‌ ಅಂಬಾಸಿಡರ್‌ ಆಗಿ ಮಾಡಿಕೊಂಡಿದ್ದಾರೆ. ಶಿವನು ಆಶೀರ್ವಾದ ಮಾಡಿ ಎತ್ತಿದ ಕೈ ಕಾಂಗ್ರೆಸ್‌ನ ʻಕೈʼ ಎಂಬುದು ಅವರ ವಾದವಾಗಿತ್ತು. ಹಾಗಾಗಿ ನಾವು ಕೊನೇವರೆಗೂ ನಗುತ್ತಲೇ ಇದ್ದೆವು ಎಂದು ವ್ಯಂಗ್ಯವಾಡಿದ್ದಾರೆ.

RAHUL GANDHI

ರಾಜಕುಮಾರ (ರಾಹುಲ್‌ ಗಾಂಧಿ) ಬಂದಾಗ ಪ್ರಧಾನಿ ಮೋದಿ ಸ್ವಾಗತಿಸಲಿಲ್ಲ ಎಂಬುದು ಅವರ ಪ್ರಮುಖ ದೂರು ಆಗಿತ್ತು. ಆದ್ದರಿಂದ ಅವರು ಎಂತಹ ಸ್ಟ್ಯಾಂಡ್‌ಅಪ್‌ ಕಾಮಿಡಿ ಮಾಡಿದರು ಅಂತಾ ನೀವು ಅರ್ಥಮಾಡಿಕೊಳ್ಳಬಹುದು ಎಂದರಲ್ಲದೇ ರಾಹುಲ್‌ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ರಾಹುಲ್‌ ಗಾಂಧಿ ಹಿಂದೂ ದೇವರು, ಹಿಂದೂ ಧರ್ಮ, ಹಿಂದೂ ಧರ್ಮ ಅನುಸರಿಸುವವರನ್ನು ಅವಮಾನಿಸಿದ್ದಾರೆ. ಹಿಂಸಾತ್ಮಕ ಭಾವನೆಯನ್ನು ಪ್ರಚೋಸಿದಿದ್ದಾರೆ. ಅವರು ತಮ್ಮ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Rahul gandhi and Narendra Modi

ಇದಕ್ಕೂ ಮುನ್ನ ಸಂಸತ್‌ನಲ್ಲಿ ರಾಷ್ಟ್ರಪತಿಗಳ (President Of India) ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ರಾಹುಲ್‌ ಗಾಂಧಿ, ಧಾರ್ಮಿಕ ಗುರುಗಳ ಫೋಟೋ ಪ್ರದರ್ಶಿಸಿ ಅವರ ತತ್ವಗಳನ್ನು ಪ್ರಸ್ತಾಪಿಸಿದರು. ನರೇಂದ್ರ ಮೋದಿ (Narendra Modi) ಪೂರ್ಣ ಹಿಂದೂ ಸಮಾಜ ಅಲ್ಲ, ಆರ್‌ಎಸ್‌ಎಸ್‌, ಬಿಜೆಪಿ ದೇಶದ ಸಂಪೂರ್ಣ ಹಿಂದೂಗಳ ಪ್ರತಿನಿಧಿಯಲ್ಲ ಎಂದು ಗುಡುಗಿದರಿ. ಈ ವೇಳೆ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ವಿಪಕ್ಷ ನಾಯಕರಾಗಿ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನಿಯಮಗಳನ್ನು ಮೀರಿ ಮಾತನಾಡುವಂತಿಲ್ಲ ಎಂದು ಅಮಿತ್ ಶಾ (Amit Shah) ಆಕ್ಷೇಪ ವ್ಯಕ್ತಪಡಿಸಿದರು. ಧಾರ್ಮಿಕ ವಿಚಾರಗಳನ್ನು ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಈ‌ ನಡುವೆ ದೊಡ್ಡ ಮಟ್ಟದಲ್ಲಿ ಗದ್ದಲ ಏರ್ಪಟ್ಟಿತು.

Share This Article