ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ ಪ್ರಕರಣದ ಸಂಪೂರ್ಣ ಹೊಣೆ ಹೊತ್ತಿರುವ ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಘಟನೆಗೆ ಸಂಬಂಧಿಸಿದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ತಮ್ಮ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಹಿಂದುರಿಗಿದ ಬಳಿಕ ಮಾತನಾಡಿದ ಸ್ಮಿತ್, ನನ್ನಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ನನ್ನ ಪೋಷಕರಿಗೆ ತುಂಬಾ ನೋವಾಗಿದೆ. ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರಿಟಿದ್ದಾರೆ.
Advertisement
Advertisement
ಕ್ರಿಕೆಟ್ ಆಟವನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ಕ್ರಿಕೆಟ್ ಆಡುವ ಮಕ್ಕಳ್ಳನ್ನು ಪ್ರೀತಿಸುತ್ತೇನೆ. ಆದರೆ ನೀವು ನನ್ನನ್ನು ಪ್ರಶ್ನಿಸುವಂತಹ ಸಮಯ ಬಂದಿರುವುದು ದುರದೃಷ್ಟಕರ. ಮೊದಲು ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದರು.
Advertisement
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸದಂತೆ ಸ್ಮಿತ್ ಮತ್ತು ಬ್ಯಾನ್ ಕ್ರಾಫ್ಟ್ ಪಂದ್ಯದ ನಂತರ ಮಾತನಾಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದರು.
Advertisement
#WATCH Steve Smith says, 'there was a failure of leadership, of my leadership', breaks down as he addresses the media in Sydney. #BallTamperingRow pic.twitter.com/hXKB4e7DR2
— ANI (@ANI) March 29, 2018
ಮೌನ ಮುರಿದ ವಾರ್ನರ್: ಸ್ಮಿತ್ ಹೇಳಿಕೆಗೂ ಮುನ್ನವೇ ವಾರ್ನರ್ ಸಾಮಾಜಿಕ ಜಾಲದಲ್ಲಿ ಕ್ಷಮೆ ಕೇಳಿದ್ದು, ಪ್ರಕರಣದ ಪೂರ್ಣ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!
https://www.instagram.com/p/Bg5NwaFn2ZK/?utm_source=ig_embed
ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದು ಕೊಂಡಿರುವ ಅವರು, ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಈ ಕೃತ್ಯದಿಂದ ಕ್ರೀಡಾ ಅಭಿಮಾನಿಗಗಳಿಗೆ ಮತ್ತು ಕ್ರೀಡಾ ಮೌಲ್ಯಗಳಿಗೆ ದಕ್ಕೆ ಉಂಟಾಗಿದೆ. ಅಭಿಮಾನಿಗಳಿಗೆ ಉಂಟಾದ ನೋವನ್ನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ನನ್ನ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಪ್ರೀತಿ. ಸದ್ಯ ತಾನು ನನ್ನ ಕುಟುಂಬ, ಸ್ನೇಹಿತರು ಮತ್ತು ವಿಶ್ವಾಸಾರ್ಹ ಸಲಹೆಗಾರರೊಂದಿಗೆ ಸಮಯ ಕಳೆಯಬೇಕಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!
ಆಸೀಸ್ ಕ್ರಿಕೆಟ್ ಮಂಡಳಿ ಬುಧವಾರ ಚೆಂಡು ವಿರೂಪಗೊಳಿಸಿದ ಪ್ರಮುಖ ಆಟಗಾರರಾದ ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷದ ಕಾಲ ನಿಷೇಧ ವಿಧಿಸಿ ಕಠಿಣ ಸಂದೇಶ ರವಾನಿಸಿತ್ತು. ಆದರೆ ದೇಶಿಯ ಕ್ರಿಕೆಟಿನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಬಿಸಿಸಿಐ ಕೂಡ ಐಪಿಎಲ್ ನಲ್ಲಿ ಒಂದು ವರ್ಷ ಭಾಗವಹಿಸಿಲು ನಿಷೇಧ ವಿಧಿಸಿದೆ. ಇನ್ನು ಚೆಂಡು ವಿರೂಪಗೊಳಿಸಿದ್ದ ಬ್ಯಾನ್ ಕ್ರಾಫ್ಟ್ 9 ತಿಂಗಳು ನಿಷೇಧ ಒಳಗಾಗಿದ್ದಾರೆ. ಸದ್ಯ ಮೂವರನ್ನು ವಿಚಾರಣೆಗೊಳಪಟ್ಟ ಬಳಿಕ ಆಸ್ಟ್ರೇಲಿಯಾಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!