ಮುಂಬೈ: 15ನೇ ಆವೃತ್ತಿಯ ಐಪಿಎಲ್‍ಗಾಗಿ 8 ತಂಡಗಳು ತಮ್ಮ ರಿಟೈನ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಇನ್ನುಳಿದಂತೆ ಕೆಲ ಸ್ಟಾರ್ ಆಟಗಾರರು 8 ತಂಡಗಳಿಂದ ಹೊರಬಂದು ಹೊಸ ತಂಡ ಸೇರಿಕೊಳ್ಳಲು ಕಾತರರಾಗಿದ್ದಾರೆ. ಈ ನಡುವೆ ಪಂಜಾಬ್ ತಂಡದ ನಾಯಕನಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್‍ನ್ನು ಫ್ರಾಂಚೈಸ್ ಕೈಬಿಟ್ಟಿದೆ. ಬಳಿಕ ರಾಹುಲ್ ಸಾಮಾಜಿಕ ಜಾಲತಾಣದ ಮೂಲಕ ಪಂಜಾಬ್ ತಂಡಕ್ಕೆ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.
ಈ ಹಿಂದಿನ ಆವೃತ್ತಿಗಳಲ್ಲಿ ಪಂಜಾಬ್ ಪರ ರಾಹುಲ್ ನಾಯಕನಾಗಿ ಯಶಸ್ವಿಯಾಗದೇ ಇದ್ದರೂ ಕೂಡ ಆಟಗಾರನಾಗಿ ಭರ್ಜರಿ ಪ್ರದರ್ಶನ ನೀಡಿದ್ದರು. ಆ ಬಳಿಕ ಮೆಗಾ ಹರಾಜಿಗೆ ರಾಹುಲ್‍ರನ್ನು ಬಿಟ್ಟುಕೊಡದೆ ತಂಡದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿತು ಆದರೆ ರಾಹುಲ್ ಹೊರಬರಲು ಇಚ್ಚಿಸಿದ್ಧರಿಂದಾಗಿ ಪಂಜಾಬ್ ರಾಹುಲ್‍ರನ್ನು ರಿಟೈನ್ ಮಾಡಿಕೊಳ್ಳದೆ ಕೈಬಿಟ್ಟಿದೆ. ಇದೀಗ ಮುಂದಿನ ಜನವರಿಯಲ್ಲಿ ನಡೆಯುವ ಮೆಗಾ ಹರಾಜಿನಲ್ಲಿ ರಾಹುಲ್ ಬೇರೆ ತಂಡಕ್ಕೆ ಸೇಲ್ ಆಗಿ ಆ ತಂಡದ ಪರ ಆಡಲಿದ್ದಾರೆ. ಇದನ್ನೂ ಓದಿ: ಲಕ್ನೋ ಫ್ರಾಂಚೈಸ್ ನೀಡಿದ ಆಫರ್‌ನಿಂದ ರಾಹುಲ್, ರಶೀದ್ ಖಾನ್‍ಗೆ ಐಪಿಎಲ್ ಬ್ಯಾನ್ ಭೀತಿ?
Advertisement
It was a good ride, thank you for the love ❤️ see you on the other side ???????? @PunjabKingsIPL pic.twitter.com/fFKtlOqghR
— K L Rahul (@klrahul) December 1, 2021
Advertisement
ರಾಹುಲ್ ಪಂಜಾಬ್ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜೊತೆಗೆ ಕನ್ನಡಿಗರಾದ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿದ್ದರೆ, ಕರ್ನಾಟಕ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ತಂಡದಲ್ಲಿ ಜೊತೆಗಿದ್ದರು. ಇದೀಗ ತಂಡದಿಂದ ಹೊರಬಂದಿರುವ ರಾಹುಲ್ ಪಂಜಾಬ್ ತಂಡದೊಂದಿಗಿನ ಪಯಣ ಉತ್ತಮವಾಗಿತ್ತು. ನಿಮ್ಮ ಪ್ರೀತಿಗೆ ಧನ್ಯವಾದಗಳು. ನನ್ನನ್ನು ಇನ್ನುಮುಂದೆ ಎದುರಾಳಿ ತಂಡದಲ್ಲಿ ನೋಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪಂಜಾಬ್ ಫ್ರಾಂಚೈಸ್‍ಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: IPL 2022 Retentions: ಧೋನಿಗಿಂತಲೂ ಜಡೇಜಾ ದುಬಾರಿ – ಯಾರಿಗೆ ಎಷ್ಟು ಕೋಟಿ?
Advertisement
Advertisement