ಬೆಂಗಳೂರು: ನೋಟು ನಿಷೇಧದ ಬಳಿಕ ಪ್ರಭಾವಿ ವ್ಯಕ್ತಿಗಳ ಮೇಲೆ ಐಟಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಸದ್ಯ ಐಟಿ ಇಲಾಖೆ ಬಾಲಿವುಡ್ ನಟರು, ನಿರ್ಮಾಪಕರು, ಬಿಲ್ಡರ್‍ಗಳ ಮೇಲೆ ಬೃಹತ್ ದಾಳಿಗೆ ಸಜ್ಜಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಐಟಿ ದಾಳಿಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮತ್ತು ಸೆಬಿ ಕೂಡ ದಾಳಿ ನಡೆಸಲು ಸಿದ್ಧವಾಗಿದೆ. ಈಗಾಗಲೇ ಐಟಿ ಇಲಾಖೆ ಬ್ಲಾಕ್ ಅಂಡ್ ವೈಟ್ ದಂಧೆ ನಡೆಸಿದ್ದ 331 ಶೆಲ್ ಕಂಪನಿಗಳ ಪಟ್ಟಿ ಮಾಡಿದೆ. ಈ ಸಂಬಂಧ ಹಲವರಿಗೂ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.
Advertisement
ಹಲವಾರು ಸಣ್ಣ ದಲ್ಲಾಳಿಗಳು ಈಗಾಗಲೇ ಶಂಕಿತ ಶೆಲ್ ಕಂಪನಿಗಳ ಜೊತೆ ಅಕ್ರಮದಲ್ಲಿ ತೊಡಗಿದ್ದು, ಹಣದುಬ್ಬರವನ್ನು ಸೃಷ್ಟಿಸುವಲ್ಲಿ ಇವರ ಪಾತ್ರವಿದೆ ಎಂದು ಗೊತ್ತಾಗಿದೆ. ಹಲವಾರು ಕಂಪನಿಗಳು, ರಿಯಲ್ ಎಸ್ಟೇಟ್, ಸಿನಿಮಾ ಹಾಗೂ ಟಿವಿ ಉದ್ಯಮದಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ವ್ಯವಹಾರದಲ್ಲಿ ಮುಳುಗಿವೆ.
Advertisement
ನೋಟು ನಿಷೇಧದ ಬಳಿಕ 500ಕ್ಕೂ ಹೆಚ್ಚು ಸ್ಟಾರ್ ನಟ, ನಟಿಯರಿಂದ ಅಕ್ರಮ ಹಣ ವಿನಿಮಯ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲಾಖೆ ಮಾತ್ರ ಯಾವ ಸ್ಟಾರ್‍ಗಳ ಹೆಸರನ್ನೂ ಹೊರಹಾಕದೇ ಡೈರೆಕ್ಟ್ ರೇಡ್ ಮಾಡಲು ಸಜ್ಜಾಗುತ್ತಿದೆ ಎಂದು ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.