ರಾಮನಗರ: ಇಲ್ಲಿನ ಬಿಡದಿ ಸಮೀಪ ಇರೋ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರತಿಷ್ಠಿತ ಮನರಂಜನಾ ತಾಣಗಳಲ್ಲಿ ಒಂದಾಗಿರುವ ಫಿಲಂ ಸಿಟಿ ಮೇಲೆ ಈ ದಾಳಿ ನಡೆದಿದ್ದು, 5 ಕ್ಕೂ ಹೆಚ್ಚು ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಧಿಕಾರಿಗಳು ಫಿಲಂ ಸಿಟಿಯ ಸಿಇಓ ಉಪಾಸನರವರ ವಿಚಾರಣೆ ನಡೆಸಿದ್ದಾರೆ.
ಸುಮಾರು 500 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿಯನ್ನು ನಿರ್ಮಾಣ ಮಾಡಲಾಗಿದೆ. ಕನ್ನಡದ ಆರಂಭದ ಎರಡು ಬಿಗ್ ಬಾಸ್ ರಿಯಾಲಿಟಿ ಶೋ ಲೋನಾವಾಲದಲ್ಲಿ ನಡೆದಿದ್ದರೆ, ನಂತರ ಆಯೋಜನೆಗೊಂಡ ಎಲ್ಲ ಶೋಗಳು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದಿತ್ತು.