ಬೆಂಗಳೂರು: ತೆರಿಗೆ ವಂಚನೆ (Tax Evasion) ಹಿನ್ನೆಲೆ ಬೆಂಗಳೂರಿನ (Bengaluru) ಫುಡ್ ಇಂಡಸ್ಟ್ರಿ (Food Industry) ಮೇಲೆ ಆದಾಯ ತೆರಿಗೆ ಇಲಾಖೆ (IT) ದಾಳಿ (Raid) ನಡೆಸಿದೆ. ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಅಂಗಡಿ ಹಾಗೂ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಇತ್ತೀಚಿಗೆ ಗುತ್ತಿಗೆದಾರರು, ಜ್ಯುವೆಲ್ಲರಿ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತ್ತು. ಇದೀಗ ಫುಡ್ ಇಂಡಸ್ಟ್ರಿ ಮೇಲೆ ಐಟಿ ಕಣ್ಣಿಟ್ಟಿದೆ. ಡ್ರೈಫ್ರೂಟ್ಸ್ ಕಾರ್ಖಾನೆ ಹಾಗೂ ಸ್ಟೋರ್‌ಗಳ ಮೇಲೆ ಐಟಿ ದಾಳಿ ನಡೆಸಿದ್ದು, ಒಟ್ಟು ನಗರದ ಎರಡು ಕಡೆ ದಾಳಿ ಮಾಡಿದೆ. ಇದನ್ನೂ ಓದಿ: ಸಿಎಂ ಪುತ್ರನ ಎಡವಟ್ಟು – ಯತೀಂದ್ರ ಹೇಳಿದ ಮಹದೇವ್ ಯಾರು?
ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್ ಹಾಗೂ ಬಿವಿಕೆ ಅಯ್ಯಂಗಾರ್ ರಸ್ತೆ ಬಳಿ ದಾಳಿ ನಡೆಸಿದ್ದಾರೆ. ಪಿಎಸ್ ಆಗ್ರೋ ಫುಡ್ ಎಲ್‌ಎಲ್‌ಪಿ ಕಾರ್ಖಾನೆ ಹಾಗೂ ಮಾಣಕ್ ಮೇವಾ ಡ್ರೈಫ್ರೂಟ್ಸ್ ಸ್ಟೋರ್ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ