ಹಾವೇರಿ: ಆದಾಯ ತೆರೆಗೆ ಇಲಾಖೆಯ ದಾಳಿಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣಗೌಡ ಬಿ ಪಾಟೀಲ್ ಬಂಡವಾಳ ಬಯಲಾಗಿದ್ದು, ಬೆಂಗಳೂರಿನ ರಾಜಮಹಲ್ ಹೋಟೆಲ್‍ನಲ್ಲಿ 2 ಕೋಟಿ ರೂ. ಹಾಗೂ ಜಿಲ್ಲೆಯ ಕಚೇರಿಯಲ್ಲಿಯೂ ಹಣ ಪತ್ತೆಯಾಗಿದೆ.
ಹಾವೇರಿಯಲ್ಲಿ ನಾರಾಯಣಗೌಡಗೆ ಸಂಬಂಧ ಪಟ್ಟ ಮೂರು ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಮನೆ ಮತ್ತು ಕಚೇರಿಯಲ್ಲಿ ಪತ್ತೆಯಾದ 500, 2000 ರೂಪಾಯಿಯ ಒಟ್ಟು 25 ಲಕ್ಷ ಕಂತೆ ಕಂತೆ ನೋಟನ್ನು ಸೀಜ್ ಮಾಡಿದ್ದಾರೆ. ಇನ್ನು ಐಟಿ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ ಪಾಟೀಲ್ ಪರಾರಿಯಾಗಿದ್ದಾರೆ. ಆತನ ಚಾಲಕ ಮತ್ತು ಹಣ ಸಾಗಾಟ ಮಾಡಲು ಬಳಸಿದ್ದ ಕಾರನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
Advertisement
ನಾರಾಯಣಗೌಡ ಬಿ ಪಾಟೀಲ್ ಬೆಂಗಳೂರಿನ ರಾಜಮಹಲ್ ಹೋಟೆಲ್‍ನಲ್ಲಿ ಮೂರು ರೂಂ ಬುಕ್ ಮಾಡಿ ಇಟ್ಟಿದ್ದ 2 ಕೋಟಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹಾವೇರಿಯಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಲೆಕ್ಕಪತ್ರ ಸಹಾಯಕ ನಾರಾಯಣಗೌಡ ಪಾಟೀಲ ಕೆಲಸ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಶೋಧ ನಡೆಸಲಾಗಿದೆ.
Advertisement
ಲೋಕಸಭಾ ಚುನಾವಣೆ ಹೊತ್ತಲ್ಲೇ ಈ ಹಣ ಪತ್ತೆಯಾಗಿರುವುದರಿಂದ ರಾಜ್ಯದ ಜನರಲ್ಲಿ ಕೂತುಹಲ ಹುಟ್ಟಿಸಿದೆ. ಸದ್ಯಕ್ಕೆ ರಾಜಕೀಯ ಕಾರ್ಯಕ್ರಮ ಹಾಗೂ ರ‍್ಯಾಲಿಗಳಿಗೆ ಈ ಹಣವನ್ನು ಬಳಸಿಕೊಳ್ಳಲು ಸಂಗ್ರಹಿಸಿ ಇಡಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ವಶಕ್ಕೆ ಪಡೆದಿರುವ ಚಾಲಕ, ನನಗೆ ಏನು ಗೊತ್ತಿಲ್ಲ. ನಾನು ನಾರಾಯಣಗೌಡ ಅವರ ಜೊತೆ ಬಂದಿದ್ದೆ. ಹೋಟೆಲಿಗೆ ನಾನು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿದ್ದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv