ಚಿಕ್ಕಮಗಳೂರು: ಮಾಜಿ ಎಂ.ಎಲ್.ಸಿ. ಚಿಕ್ಕಮಗಳೂರಿನ ಪ್ರಭಾವಿ ಕಾಂಗ್ರೆಸ್ (Congress) ನಾಯಕಿ ಗಾಯತ್ರಿ ಶಾಂತೇಗೌಡ (Gayathri Shanthe Gowda) ಮನೆ ಮೇಲಿನ ಐಟಿ (IT) ದಾಳಿ ಇಂದೂ ಕೂಡ ಮುಂದುವರಿದಿದೆ.
Advertisement
ಸತತ ಎರಡನೇ ದಿನವೂ ಐಟಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ. ನಿನ್ನೆಯಿಂದ ದಾಳಿ ನಡೆಯುತ್ತಿದ್ದರು ಕೂಡ ಗಾಯತ್ರಿ ಶಾಂತೇಗೌಡ ಬೆಂಗಳೂರಿನಲ್ಲಿ ಇದ್ದು, ಈವರೆಗೂ ಮನೆಗೆ ಬಂದಿಲ್ಲ. ನಿನ್ನೆ ಗಾಯತ್ರಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಗಾಯತ್ರಿ ನಿವಾಸದ ಮುಂದಿನ ರಸ್ತೆಯ ಎರಡೂ ಸೈಡ್ ಪೊಲೀಸರು ಕಂಪ್ಲೀಟ್ ಕ್ಲೋಸ್ ಮಾಡಿದ್ದಾರೆ. ಸಾರ್ವಜನಿಕರು ಓಡಾಡದಂತೆ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಇದನ್ನೂ ಓದಿ: ಇಂದೋರ್‌ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ
Advertisement
Advertisement
ಈ ದಾಳಿಯನ್ನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಐ.ಟಿ. ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ ಕಡೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ 10ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರ ಪೊಲೀಸ್ ಹಾಗೂ ಅಧಿಕಾರಿಗಳನ್ನು ಕೈ ಗೊಂಬೆಗಳಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಜನರ ಮುಂದೆ ಏಕೆ ರಾಜಕೀಯವಾಗಿ ಬೆತ್ತಲಾಗ್ತೀರಿ – ಕಾಂಗ್ರೆಸ್‌ಗೆ ಸುಧಾಕರ್ ತಿರುಗೇಟು