ರಾಯಚೂರು: ಲಿಂಗಾಯತ ಮತ್ತು ವೀರಶೈವ ಧರ್ಮದ ಬಗ್ಗೆ ಪರವಿರೋಧ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಅಂತ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ತನ್ವೀರ್ ಸೇಠ್ ಧರ್ಮಗಳ ವಿಚಾರದಲ್ಲಿ ಸಂವಿಧಾನ ಸ್ಪಷ್ಟವಾಗಿದೆ. ಅದೇ ಸಂವಿಧಾನದಲ್ಲಿ ಇನ್ನೊಂದು ಧರ್ಮವನ್ನ ಗೌರವಿಸಬೇಕು ಅನ್ನೋದು ಇದೆ ಎಂದರು.
Advertisement
ವೀರಶೈವ ಧರ್ಮಕ್ಕೆ ದೊಡ್ಡ ಇತಿಹಾಸವಿದೆ. ಬಸವಣ್ಣನವರ ತತ್ವ ಸಿದ್ದಾಂತ ನಾಡಿನ ಉದ್ದಕ್ಕೂ ಕೆಲಸ ಮಾಡಬೇಕಾದ್ರೆ ನಮ್ಮ ವರ್ತನೆ ಸಮಾಜದಲ್ಲಿ ಹೇಗಿರಬೇಕು ಅನ್ನೋದನ್ನ ಮೊದಲು ನೋಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಯಾರ ಕಡೆ ಇದ್ದಾರೆ ಅನ್ನೋದನ್ನ ಹೇಳಲು ಆಗಲ್ಲ. ಧರ್ಮದ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಅಂತ ತನ್ವೀರ್ ಸೇಠ್ ತಿಳಿಸಿದರು.
Advertisement
ಇನ್ನೂ ಗುಜರಾತ್ ಕಾಂಗ್ರೆಸ್ ಶಾಸಕರ ಪ್ರವಾಸದ ಬಗ್ಗೆ ಮಾತನಾಡಿ ಇವತ್ತಿನ ಚುನಾವಣಾ ವ್ಯವಸ್ಥೆ ನಮ್ಮ ಮತದಾರರನ್ನ ನಾವೇ ಕಾಪಾಡಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಬಿಜೆಪಿಯ ಬೆದರಿಕೆ ರಾಜಕಾರಣ ಎಲ್ಲರಿಗೂ ಗೊತ್ತಿರುವುದೇ, ಜನರ ರಕ್ಷಣೆಗಿಂತ ಅಧಿಕಾರ ಪಡೆಯಲು ತಂತ್ರಗಾರಿಕೆ ನಡೆಯುತ್ತಿದೆ. ಚುನಾಯಿತ ಪ್ರತಿನಿಧಿಗಳು ಮಾರಾಟವಾಗುವುದನ್ನ ನೋಡುತ್ತಿದ್ದೇವೆ ಮತ ಚಲಾಯಿಸುವ ಹಕ್ಕು ನಮ್ಮದಾಗಿದ್ರೂ ಬೇರೆ ರೀತಿಯಲ್ಲಿ ಒತ್ತಡ ತರುತ್ತಿರುವುದರಿಂದ ಗುಜರಾತ್ ಶಾಸಕರು ನಮ್ಮ ರಾಜ್ಯಕ್ಕೆ ಪ್ರವಾಸಕ್ಕೆ ಬಂದಿದ್ದಾರೆ ಅವರು ಹೇಳಿದರು.
Advertisement