ಹುಬ್ಬಳ್ಳಿ: ಇವತ್ತು ನಾಗರಿಕತೆ ಬೆಳೆದಿದೆ. ಮಸೀದಿ (Mosque), ದೇವಸ್ಥಾನ (Temple) ಕೆಡವೋದು ನೋವಿನ ಸಂಗತಿ. ಆದರೆ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
Advertisement
ಹುಬ್ಬಳ್ಳಿಯ (Hubballi) ಬೈರಿದೇವರಕೊಪ್ಪ ದರ್ಗಾ ಭೇಟಿಯ ಬಳಿಕ ಮಾತನಾಡಿದ ಅವರು, ದರ್ಗಾ ಶಿಪ್ಟ್ ಮಾಡೋ ಕಾರ್ಯಚಾರಣೆ ವೀಕ್ಷಿಸಲು ಬಂದಿದ್ದೆ. ದರ್ಗಾದ ಮುಖ್ಯಸ್ಥರು ದರ್ಗಾ ಶಿಫ್ಟ್ ಮಾಡೋದಕ್ಕೆ ಸಹಕರಿಸಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳ್ತೀನಿ. ಜೊತೆಗೆ ಹೊಸ ಮಸೀದಿ ಕಟ್ಟೋಕೆ ತೀರ್ಮಾನ ಮಾಡಿದ್ದಾರೆ. ಜಾಗ ನೋಡಿದ್ರೆ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ
Advertisement
Advertisement
ಇದೇ ರಸ್ತೆಯಲ್ಲಿ 13 ದೇವಸ್ಥಾನ ಕೆಡವಿದ್ದೇವೆ. ನಾವು ಕೆಲವು ಸಲ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗತ್ತೆ. ರಾಜ್ಯದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಸೂಚನೆ ಪಾಲಿಸಬೇಕಾಗತ್ತೆ ಎಂದು ತಿಳಿಸಿದ್ದಾರೆ.
Advertisement
ದೇವಸ್ಥಾನವಾಗಲಿ ಅಥವಾ ಮಸೀದಿಯಾಗಲಿ, ಆದಷ್ಟು ಉಳಿಸೋ ಪ್ರಯತ್ನ ಮೊದಲನೆಯದ್ದು. ಇಲ್ಲದಿದ್ರೆ ಶಾಂತಿಯುತವಾಗಿ ಶಿಫ್ಟ್ ಮಾಡೋದು ಎರಡನೇ ಪಯತ್ನ. ಆಮೇಲೆ ನೆಲಸಮ ಮಾಡಲೇಬೇಕಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ