ಬೆಂಗಳೂರು: ಚುನಾವಣೆ (Election) ಸಮಯದಲ್ಲಿ ಪದೇ ಪದೇ ಕಣ್ಣೀರು (Tears) ಹಾಕೋದು ಸರಿಯಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಮತ್ತು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಸಚಿವ ಮಹದೇವಪ್ಪ (Mahadevappa) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಾ ಮತಗಳ ಮೇಲೆ ಕಣ್ಣು ಇಟ್ಟಿರುತ್ತಾರೆ.ಆದರೆ ಜನ ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ಏನು ಕೆಲಸ ಮಾಡುತ್ತಾರೆ ಏನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ ನೋಡಿ ಮತ ಹಾಕುತ್ತಾರೆ. ಚನ್ನಪಟ್ಟಣ ಕಾಂಗ್ರೆಸ್ ಪರ ಇದೆ. ಈಗ ವಾತಾವರಣ ಶುರುವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭುಗಿಲೆದ್ದ ವಕ್ಫ್ ಆಸ್ತಿ ವಿವಾದ – ರಾಜ್ಯಾದ್ಯಂತ ಕೇಸರಿ ಪಡೆಯ ಪ್ರತಿಭಟನೆ ಜೋರು
ಕುಮಾರಸ್ವಾಮಿ ಮತ್ತು ನಿಖಿಲ್ ಕಣ್ಣೀರು ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್‌ಗಳು. ಹೀಗೆ ಅಳೋದು ಸರಿಯಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಮೀರ್ ಇಸ್ಲಾಂ ಧರ್ಮ, ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸೋ ಪ್ರಯತ್ನದಲ್ಲಿದ್ದಾರೆ: ಮಾದಾರ ಚನ್ನಯ್ಯ ಶ್ರೀ
ದೇವೇಗೌಡರು ಅಂಬ್ಯುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಆರೋಗ್ಯ ಚೆನ್ನಾಗಿ ಇರಲಿ. ಕಣ್ಣೀರು, ರಾಜಕೀಯ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಸಂಬಂಧ ಇದೆ. ಜನರು ಕ್ಷೇತ್ರದ ಅಭಿವೃದ್ಧಿಯನ್ನು ಚುನಾವಣೆಯಲ್ಲಿ ನೋಡುತ್ತಾರೆ. ಕಣ್ಣೀರಿಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್ – ಕನಿಷ್ಠ 20 ಮಂದಿ ದಾರುಣ ಸಾವು