– ಕುಮಾರಣ್ಣ ಬೇಕಿದ್ರೆ ನೀವು ಬಿಜೆಪಿ ಸೇರಿಕೊಳ್ಳಿ
– ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ
– ಮಂಡ್ಯದ ಜನರನ್ನು ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದ ಸಚಿವ
ಮಂಡ್ಯ: ಮಾಜಿ ಪ್ರಧಾನಿಯವರ ಮಗನಾದ ಕುಮಾರಸ್ವಾಮಿ (KumaraSwamy) ಅವರು ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ.
Advertisement
ಶಾಸಕ ಗಣಿಗ ರವಿಕುಮಾರ್ (Ganiga Ravikumar) , ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ಜೊತೆಗೂಡಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಸಿಎಂ ಹೆಚ್‌ಡಿಕೆಗೆ ಮಂಡ್ಯ ಎಲ್ಲಾ ರೀತಿಯ ಶಕ್ತಿ ನೀಡಿದೆ. ಈ ಜಿಲ್ಲೆಯ ಜನರು ಅವರಿಗೆ ಸ್ವಂತ ಜಿಲ್ಲೆಗಿಂತ ಹೆಚ್ಚಿನ ಪ್ರೀತಿ, ಮಹತ್ವ ಕೊಟ್ಟಿದ್ದರು. ಆದರೂ ಅವರು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ನಮ್ಮ ಯುವಕರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ. ನನ್ನ ಮೇಲೆ ಅಥವಾ ಸ್ಥಳೀಯ ಶಾಸಕರ ಮೇಲೆ ದ್ವೇಷ ಮಾಡಿ. ಆದರೆ ಜಿಲ್ಲೆಯ ಜನತೆ ಮೇಲೆ ದ್ವೇಷ ಮಾಡಿ ಗಲಭೆ ಮಾಡಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ: ಕೆರಗೋಡು ಕೇಸ್ ತನಿಖೆಗೆ ಆಗ್ರಹಿಸಿ ಹೆಚ್‌ಡಿಕೆ ಸವಾಲು
Advertisement
ನಮ್ಮ ಜಿಲ್ಲೆಯ ಜನ ಸ್ವಾಭಿಮಾನ, ಗೌರವದಲ್ಲಿ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಬಂದು ಜನರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡಲು ಈ ಜಿಲ್ಲೆ ಜನರ ಆಶೀರ್ವಾದ ಕಾರಣ. ಬಾವುಟದ ವಿಚಾರದಲ್ಲಿ ಇವತ್ತು ಪ್ರತಿಭಟನೆ, ಪಾದಯಾತ್ರೆ ಮಾಡ್ತಿದ್ದಾರೆ. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾಕೆ ಇಂತಹ ನಿರ್ಧಾರ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ ಇಲ್ಲ. ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾನೂನು ವಿರುದ್ಧ ಯಾರೇ ನಡೆದುಕೊಂಡರು ಅವರ ವಿರುದ್ಧ ಕ್ರಮ: ಪರಮೇಶ್ವರ್
Advertisement
Advertisement
ಜಯಪ್ರಕಾಶ್ ನಾರಾಯಣ್, ಮಾಜಿ ಪ್ರಧಾನಿ ಹೆಚ್‌ಡಿಕೆ ಜಾತ್ಯತೀತವಾಗಿ ಜೆಡಿಎಸ್ ಪಕ್ಷ ಕಟ್ಟಿದ್ರು. ಆದರೆ ನೀವು ನಿನ್ನೆ ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ. ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಹೋರಾಟ ಮಾಡ್ತಿದ್ರಿ. ಆದ್ರೆ ಇದೀಗ ರಾಷ್ಟ್ರಧ್ವಜ ಹೋರಾಟ ಮಾಡ್ತಿದ್ದೀರಿ. ಅಂದರೆ ನಿಮ್ಮ ಉದ್ದೇಶ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸೋದಾ? ನಿಮ್ಮ ಹೋರಾಟ ರಾಷ್ಟ್ರ ದ್ವಜ ವಿರುದ್ಧವೇ? ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸುವ ಸಲುವಾಗಿಯೇ ಹೋರಾಟ ಮಾಡ್ತಿದ್ದೀರಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ದೇಶದ ಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಆನೆ ಕ್ಯಾಪ್ಟನ್ ಅರ್ಜುನನ ವೀರಮರಣದ ಕೊನೇ ಕ್ಷಣದ ರೋಚಕ ವೀಡಿಯೋ ವೈರಲ್
ಕುಮಾರಸ್ವಾಮಿ ಒಂದು ವೇಳೆ ಅಧಿಕಾರದಲ್ಲಿದ್ರೆ ಏನು ಮಾಡ್ತಿದ್ರಿ? ರಾಷ್ಟ್ರಧ್ವಜ ತೆಗೆದು ಬೇರೆ ಧ್ವಜ ಹಾಕಲು ಅನುಮತಿ ಕೊಡ್ತಿದ್ರಾ? ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರೋ ನಿರ್ಧಾರ ಸರಿಯಾಗಿದೆ. ಆದರೆ ನಿನ್ನೆ ಪಾದಯಾತ್ರೆ ಮಾಡಿ ಜನರ ನೆಮ್ಮದಿ ಕೆಡಿಸಿದ್ದೀರಿ. ಇದನ್ನ ಈ ಜಿಲ್ಲೆಯ ಜನ ಕ್ಷಮಿಸಲ್ಲ. ಈ ಜಿಲ್ಲೆಯ ಜನರನ್ನ ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿ ಬಿಜೆಪಿಗೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತೆ: ರಮೇಶ್ ಕತ್ತಿ
ಕೆರಗೋಡು ಹನುಮಧ್ವಜ ವಿವಾದ ವಿಚಾರ ಕುರಿತು ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು ಗ್ರಾಮಸ್ಥರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಷರತ್ತುಗಳಿಗೆ ಒಪ್ಪಿಕೊಂಡು ಧ್ವಜಸ್ತಂಭ ಹಾಕಿದ್ದಾರೆ. ಆದರೆ ಷರತ್ತುಗಳ ಮೀರಿ ಇವರು ಹನುಮಧ್ವಜ ಹಾಕಿದ್ದಾರೆ. ಅದಕ್ಕಾಗಿ ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾಕಲಾಗಿದೆ. ಆದರೆ ಇಲ್ಲಿ ಯಾಕೆ ಇಷ್ಟೊಂದು ಗೊಂದಲ ಮಾಡಿದ್ದಾರೋ ಗೊತ್ತಿಲ್ಲ. ಇಲ್ಲಿನ ಜನರ ನೆಮ್ಮದಿ ಹಾಳು ಮಾಡೋದಕ್ಕೆ ಹೆಚ್‌ಡಿಕೆ, ಆರ್.ಅಶೋಕ್, ಸಿ.ಟಿ.ರವಿ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ನಾಮಫಲಕ ವಿಚಾರ – ಎರಡು ಗುಂಪುಗಳ ನಡುವೆ ಘರ್ಷಣೆ
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೆಚ್‌ಡಿಕೆ ಗಮನಹರಿಸಿಲ್ಲ, ಹೋರಾಟ ಮಾಡಿಲ್ಲ. ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಿನ್ನೆ ಬಂದು ರಾಷ್ಟ್ರಧ್ವಜ ಹಾಕಿರೋದಕ್ಕೆ ಹೋರಾಟ ಮಾಡಿದ್ದೀರಿ. ಬಿಜೆಪಿ ನಾಯಕರ ಜೊತೆ ಸೇರಿ ರಾಷ್ಟ್ರಧ್ವಜ ವಿರುದ್ಧ ಪ್ರತಿಭಟನೆ ನಡೆಸಿದ್ದೀರಿ. ಕುಮಾರಣ್ಣ ನಿಮಗೆ ತಾಳ್ಮೆ ಇರಲಿ. ಸೋತಿದ್ದೀನಿ ಅನ್ನುವ ನಿರಾಸೆಗೆ ಏನೇನೋ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಜಿಲ್ಲೆಯ ಜನ ನಿಮಗೆ ಹೆಚ್ಚಿನ ಪ್ರೀತಿ ಕೊಟ್ಟಿದ್ದಾರೆ. ಹೊರಗಿನಿಂದ ಬಂದು ಇಲ್ಲಿ ಅಧಿಕಾರ ಅನುಭವಿಸಿದ್ದೀರಿ. ಹಾಗಾಗಿ ಇಲ್ಲಿಯ ಜನಕ್ಕೆ ಅನ್ಯಾಯ ಮಾಡಬೇಡಿ. ಬೇಕಿದ್ರೆ ನೀವು ಬಿಜೆಪಿ ಸೇರ್ಪಡೆ ಆಗಿಬಿಡಿ. ಕೇಸರಿ ಬಟ್ಟೆ ಹಾಕಿಕೊಂಡು ಬಿಜೆಪಿ ಸೇರಿಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್ ವಾಗ್ದಾಳಿ
ಇವರ ಸುಳ್ಳು ಪ್ರಚೋದನೆಗೆ ಯಾರೂ ಕಿವಿಗೊಡಬೇಡಿ. ನಿಮ್ಮ ಕಷ್ಟ-ಸುಖಕ್ಕೆ ನಾವು ಜೊತೆಯಾಗಿ ಇರುತ್ತೀವಿ. ಮುಂದಿನ ನಾಲ್ಕು ವರ್ಷ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇವೆ. ಕಾವೇರಿ ವಿಚಾರ, ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸೂಕ್ತ ನಿರ್ಧಾರ ಮಾಡ್ತಿದ್ದೀವಿ. ಇಂತಹ ಅಪಪ್ರಚಾರ, ಪ್ರಚೋದನೆಗೆ ಕಿವಿಗೊಡಬೇಡಿ ಎಂದು ಮಂಡ್ಯದ ಜನತೆಗೆ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ED ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್ BMW ಕಾರು ವಶಕ್ಕೆ