ಬೆಳಗಾವಿ: ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಹಾಗೆನಾದ್ರೂ ಆಗಿದ್ದರೆ ಎಲ್ಲರೂ ಸೇರಿಕೊಂಡು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡೋಣ ಅಂತ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬಜೆಟ್ ಬಗ್ಗೆ ಮಾತನಾಡಿದ ಅವರು, ಇದು ಪೈನಲ್ ಬಜೆಟ್ ಅಲ್ಲಾ ಮತ್ತೆ ಸಪ್ಲಿಮೆಂಟರಿ ಬಜೆಟ್ ನಲ್ಲಿ ನ್ಯಾಯ ಒದಗಿಸೋಣ ಅಂದ್ರು. ಇದೇ ವೇಳೆ ಬಜೆಟ್ ಕುರಿತು ಮಾಜಿ ಸಚಿವ ಎಚ್.ಕೆ ಪಾಟೀಲ್ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಎಚ್.ಕೆ ಪಾಟೀಲ್ ಅವರು ಯಾವ ಆಧಾರದ ಮೇಲೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ ಗೊತ್ತಿಲ್ಲ. ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಅಂದ್ರು.
Advertisement
Advertisement
ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ವಿರೋಧ ಪಕ್ಷದವರು ದೊಡ್ಡದಾಗಿ ಹೇಳಿ ಅದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 34 ಸಾವಿರ ಕೋಟಿ ರೂ. ರೈತರ ಸಾಲಾ ಮನ್ನಾ ಮಾಡಿದ್ದೇವೆ. ಅದು ಹಾಸನ ಮೈಸೂರು ರೈತರಿಗಷ್ಟೇ ಇಲ್ಲ. ಇಡೀ ರಾಜ್ಯದ ರೈತರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ವಿಭಜನೆ ಮಾಡಲು ಬಿಡುವುದಿಲ್ಲ. ನಮ್ಮದು ಅಖಂಡ ಕರ್ನಾಟಕ. ಯಾರೋ ಒಬ್ಬರು ಆ ರೀತಿ ಕೂಗೆತ್ತಿದರು ಜನರು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು ಅಂತ ಹೇಳಿದ್ರು.
Advertisement
ಬಜೆಟ್ ನಿಂದ ಕೆಲವರಿಗೆ ಅಸಮಾಧಾನ ಇರುತ್ತೆ. ಅವರ ಹೇಳಿಕೆಗಳಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಬಜೆಟ್ ನಿಂದ ನಮ್ಮ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸುಭದ್ರವಾಗಿ ಐದು ವರ್ಷ ನಮ್ಮ ಸರ್ಕಾರ ನಡೆಯುತ್ತೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಹೀಗಾಗಿ ಆ ಭಾಗಕ್ಕೆ ಕಡಿಮೆ ಅನುದಾನ ಸಿಕ್ಕಿರಬಹುದು ಅಂತ ತಿಳಿಸಿದ್ರು.