ಬೆಂಗಳೂರು: ಸಿ-ಫೋರ್ ಸರ್ವೇ ಅಲ್ಲ. ಇದು ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಮಾಡಿದ ಸರ್ವೇ. ಅದು ಬಸವರಾಜೇಂದ್ರ ಪತ್ರದ ಬೆನ್ನಲ್ಲೇ ಸರ್ವೇ ರಿಪೋರ್ಟ್ ಆಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಷ್ಟು ದಿನ ಬರದಿದ್ದುದು ನಿನ್ನೆಯೇ ಸರ್ವೇ ಏಕೆ ಬರಬೇಕು? ಎಸಿಬಿ ದುರ್ಬಳಕೆ ಮರೆಮಾಚಲು ಈ ಸರ್ವೇ ಬಿಡುಗಡೆ ಮಾಡಿದ್ದಾರೆ. ಅದು ಕೆಂಪಯ್ಯ, ದಿನೇಶ್ ಅಮೀನ್ ಮಟ್ಟು ಸೇರಿ ಮಾಡಿರೋ ಸರ್ವೇ ಎಂದು ಹೇಳಿದರು.
Advertisement
ದಿನೇಶ್ ಗುಂಡೂರಾವ್ ಅವರಿಗೆ ನಾಚಿಕೆ ಆಗಬೇಕು. ಒಂದು ವಾರ ಆಗಿಲ್ಲ ಆಗಲೇ ಇಂದಿರಾ ಕ್ಯಾಂಟೀನ್ ಮುಚ್ಚುತ್ತಿವೆ. ಅಡುಗೆ ಮಾಡೋರೆಲ್ಲಾ ಓಡಿ ಹೋಗ್ತಿದ್ದಾರೆ. ಸರಿಯಾಗಿ ಅಡುಗೆ ಕೂಡ ತಯಾರು ಆಗುತ್ತಿಲ್ಲ ಎಂದು
ವಾಗ್ದಾಳಿ ನಡೆಸಿದರು.
Advertisement
ಸಿಎಂ ಕುರ್ಚಿ ಅಲುಗಾಡುತ್ತಿದ್ದು, ಅವರಿಗೆ ಭಯವಾಗುತ್ತಿದೆ. ಇವರ ಎಸಿಬಿಗೆ ನಾವು ಹೆದರಲ್ಲ. ಬಸವರಾಜೇಂದ್ರ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದ ದೂರಿನ ಪತ್ರವನ್ನು ದಾರಿ ತಪ್ಪಿಸಲು ಸಿ ಫೋರ್ ಸರ್ವೇ ಬಿಟ್ಟಿದ್ದಾರೆ ಎಂದು ಹೇಳಿದರು.
Advertisement
ಸಮೀಕ್ಷೆಯಲ್ಲಿ ಏನಿದೆ?
ಈಗ ಚುನಾವಣೆ ನಡೆದರೆ ಕಾಂಗ್ರೆಸ್ 120-132, ಬಿಜೆಪಿ 60-72, ಹಾಗೂ ಜೆಡಿಎಸ್ 24-30, ಇತರೆ 1-6 ಸ್ಥಾನವನ್ನು ಗೆಲ್ಲಲಿದೆ ಎಂದು ತಿಳಿಸಿದೆ.