ಹೈದರಾಬಾದ್: ಇಸ್ರೋ (ISRO) ಮತ್ತೊಂದು ಪರಾಕ್ರಮಕ್ಕೆ ಸಜ್ಜಾಗಿದ್ದು, ಕ್ರಿಸ್‌ಮಸ್ ಮುನ್ನಾ ದಿನ ಡಿಸೆಂಬರ್ 24ಕ್ಕೆ ಅತಿಭಾರದ ಬ್ಲೂಬರ್ಡ್-6 ಉಪಗ್ರಹ ಉಡಾವಣೆ ಮಾಡಲು ಸಿದ್ಧವಾಗಿದೆ.
ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಆದ ಬಾಹುಬಲಿ ಅಂತಲೂ ಕರೆಯಲ್ಪಡುವ ಎಲ್‌ವಿಎಂ3-ಎಂ6 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಡಿ.24ರಂದು ಬೆಳಗ್ಗೆ 8:54ಕ್ಕೆ ಉಡಾವಣೆ ನಿಗದಿಯಾಗಿದೆ. ಎಲ್‌ವಿಎಂ3-ಎಂ6 ರಾಕೆಟ್ 6,500 ಕೆ.ಜಿ ತೂಕದ ಭಾರಿ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆಗೆ ಸೇರಿಸಲಿದೆ.ಇದನ್ನೂ ಓದಿ: ಡಿಕೆಶಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಹೆಚ್‌ಡಿಕೆ
ಈ ವರ್ಷದ ಇಸ್ರೋ ಕೈಗೊಂಡ ಅತ್ಯಂತ ಮಹತ್ವದ ವಾಣಿಜ್ಯ ಉಡಾವಣೆಗಳಲ್ಲಿ ಇದು ಸೇರಲಿದೆ. ನೀವು ಎಲ್ಲೇ ಇದ್ದರೂ ಮೊಬೈಲ್ ಫೋನ್‌ಗೆ ನೇರ ಇಂಟರ್‌ನೆಟ್ ಸೌಲಭ್ಯ ಸಿಗಲಿದೆ. ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ಎಂಬ ಖಾಸಗಿ ಸಂಸ್ಥೆ, ತಾನು ತಯಾರಿಸಿದ ಸ್ಮಾರ್ಟ್ಫೋನ್‌ಗಳನ್ನು ಉಪಗ್ರಹಗಳಿಗೆ ನೇರವಾಗಿ ಸಂಪರ್ಕಿಸುವ ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುವ ಭಾಗವಾಗಿ ಈ ಉಪಗ್ರಹ ರೂಪಿಸಿದೆ.

