ಶ್ರೀಹರಿಕೋಟಾ: ಇಸ್ರೋ ಇಂದು ಭಾರತದ ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್-29ನ್ನು ಉಡಾವಣೆ ಮಾಡಿದೆ. ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಸಂಜೆ 5.08ಕ್ಕೆ ಜಿಎಸ್‍ಎಸ್‍ವಿ ಎಂಕೆ3-ಡಿ2 ರಾಕೆಟ್ ಮೂಲಕ ಉಪಗ್ರಹ ಉಡಾವಣೆ ಮಾಡಲಾಯಿತು.
3,423 ಕೆಜಿ ತೂಕವುಳ್ಳ ಜಿಸ್ಯಾಟ್-29 ಜಮ್ಮು ಕಾಶ್ಮೀರ ಹಾಗು ಈಶಾನ್ಯ ಭಾಗದ ಬಳಕೆದಾರರಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲಿದೆ. ಉಡಾವಣೆ ವೇಳೆ ಗಜ ಚಂಡಮಾರುತದಿಂದ ಅಪಾಯ ಉಂಟಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದರು. ಗಜ ಚಂಡಮಾರುತ ತನ್ನ ಪಥವನ್ನ ಬದಲಿಸಿದ್ದರಿಂದ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಉಪಗ್ರಹ ಉಡಾವಣೆ ಆಗಿದೆ.
Advertisement
Mission Accomplished! ????????
Here's a stunning capture by SDSC SHAR crew of #GSLVMkIIID2 roaring away to its destination carrying #GSAT29 under the watchful eyes of Moon. The 1st operational mission of #GSLVMkIII will be #Chandrayaan-2.
Thank You for your support. pic.twitter.com/5PPjqzOoEl
— ISRO (@isro) November 14, 2018
Advertisement
ಮಂಗಳವಾರ ಮಧ್ಯಾಹ್ನ 2.50ಕ್ಕೆ ಉಡವಾಣೆಯ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿತ್ತು. ಇಂದು ಸಂಜೆ ನಿಗದಿತ 5.08ಕ್ಕೆ ಉಪಗ್ರಹ ಉಡಾವಣೆ ಆಗಿದೆ. ಶ್ರೀಹರಿಕೋಟಾದಿಂದ ಉಡಾವಣೆಗೊಂಡ 67ನೇ ಉಪಗ್ರಹ ಇದಾಗಿದ್ದು, ಭಾರತದಲ್ಲಿ ನಿರ್ಮಿಸಿದ 33ನೇ ಸಂವಹನ ಸ್ಯಾಟ್‍ಲೈಟ್ ಇದಾಗಿದೆ.
Advertisement
ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಜಿಸ್ಯಾಟ್-29 ಒಟ್ಟು 3,423 ಕೆಜಿ ತೂಕವನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರ ಹಾಗು ಈಶಾನ್ಯ ರಾಜ್ಯಗಳ ಸಂವಹನ ಸಂಪರ್ಕವನ್ನು ಕಲ್ಪಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
Advertisement
#ISROMissions#GSLVMkIIID2 lifts off majestically carrying #GSAT29 from SDSC SHAR, Sriharikota. About 17 min later, the vehicle injected satellite successfully into GTO. Post that, Master Control Facility at Hassan assumed control of satellite. @PMOIndia @narendramodi @PIB_India pic.twitter.com/abeFE7kiDU
— ISRO (@isro) November 14, 2018
#ISROMissions#GSLVMkIIID2 #GSAT29
Today's successful mission at a glance. pic.twitter.com/76pye5QGmx
— ISRO (@isro) November 14, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews