ಆರ್. ಮಾಧವನ್ ನಟಿಸಿ, ನಿರ್ಮಾಣ ಮಾಡಿ, ನಿರ್ದೇಶಿಸಿರುವ ರಾಕೆಟ್ರಿ –ದಿ ನಂಬಿ ಎಫೆಕ್ಟ್ ಸಿನಿಮಾದಲ್ಲಿ ಇಸ್ರೊಗೆ ಕುರಿತಂತೆ ಸಾಕಷ್ಟು ಸುಳ್ಳುಗಳನ್ನು ಹೇಳಲಾಗಿದೆ ಎಂದು ಇಸ್ರೊ ಮಾಜಿ ವಿಜ್ಞಾನಿಗಳ ಗುಂಪು ಆರೋಪಿಸಿದೆ. ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧರಿತ ಈ ಸಿನಿಮಾದಲ್ಲಿ ಸತ್ಯಕ್ಕೆ ದೂರವಾದಂತಹ ಅನೇಕ ಸಂಗತಿಗಳನ್ನು ಹೇಳಲಾಗಿದೆ ಎಂದು ಇಸ್ರೊ ಮಾಜಿ ವಿಜ್ಞಾನಿಗಳ ಗುಂಪು ಆರೋಪಿಸಿದೆ.
Advertisement
ಇಸ್ರೊದ ಮಾಜಿ ವಿಜ್ಞಾನಿಗಳಾದ ಡಿ.ಸಸಿಕುಮಾರನ್, ಡಾ.ಎ.ಇ ಮುತುನಾಯಗಂ, ಪ್ರೊಫೆಸರ್ ಇ.ವಿ.ಎಸ್ ನಂಬೂದಿರಿ ಸೇರಿದಂತೆ ಹಲವು ವಿಜ್ಞಾನಿಗಳು ಬುಧವಾರ ಮಾಧ್ಯಗೋಷ್ಠಿ ನಡೆಸಿ, ಸಿನಿಮಾದಲ್ಲಿ ತೋರಿಸಲಾದ ಸುಳ್ಳುಗಳ ಬಗ್ಗೆ ಮಾತನಾಡಿದ್ದಾರೆ. ಯಾವೆಲ್ಲ ಸುಳ್ಳುಗಳನ್ನು ಮಾಧವನ್ ಮತ್ತು ಟೀಮ್ ಸಿನಿಮಾದಲ್ಲಿ ಹೇಳಿದೆ ಎಂದು ಎಳೆ ಎಳೆಯಾಗಿ ಅವರು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್
Advertisement
Advertisement
ಆರ್. ಮಾಧುವನ್ ಈ ಸಿನಿಮಾದ ಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ನಂಬಿ ನಾರಾಯಣ್ ಅವರ ಪಾತ್ರವನ್ನೂ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಮಾಧುವನ್, ಇಸ್ರೊ ಸಂಸ್ಥೆಗೆ ಕಳಂಕ ತರುವಂತಹ ದೃಶ್ಯಗಳನ್ನು ಹಾಕಿದ್ದಾರೆ. ಅಲ್ಲದೇ, ಸಿನಿಮಾದಲ್ಲಿ ಇಸ್ರೊಗೆ ಸಂಬಂಧಿಸಿದ ವಿಷಯಗಳಲ್ಲಿ ಶೇ.90 ರಷ್ಟು ಸುಳ್ಳು ಇರುವುದಾಗಿ ಅವರು ಆರೋಪಿಸಿದ್ದಾರೆ.
Advertisement
ಕ್ರಯೋಜೆನಿಕ್ ತಂತ್ರಜ್ಞಾನವನ್ನು ಇಸ್ರೊ ಹೊಂದವಲ್ಲಿ ಆದ ವಿಳಂಬವೇ ನಂಬಿ ನಾರಾಯಣ್ ಬಂಧನಕ್ಕೆ ಕಾರಣ ಎಂದು ತೋರಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದದ್ದು, ಅಬ್ದುಲ್ ಕಲಾಂ ಅವರನ್ನು ತಿದ್ದಿದ್ದಕ್ಕೆ ಅವರು ಮುಂದೆ ರಾಷ್ಟ್ರಪತಿಯಾದರು ಎಂದು ಹೇಳಿಸಲಾಗಿದೆ. ಅದು ಕೂಡ ಸುಳ್ಳು. ಹೀಗೆ ಅನೇಕ ಸುಳ್ಳುಗಳನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ ಎಂದು ಮಾಜಿ ವಿಜ್ಞಾನಿಗಳು ಆರೋಪದ ಮಹಾಮಳೆ ಸುರಿಸಿದ್ದಾರೆ.