– ವಿದ್ಯುತ್, ಪೆಟ್ರೋಲ್, ಔಷಧ ಪೂರೈಕೆಗೂ ಬಂದ್
ಟೆಲ್ ಅವಿವ್: ಗಾಜಾದ (Gaza) ಮೇಲೆ ಸಂಪೂರ್ಣ ಮುತ್ತಿಗೆ ಹಾಕಿರುವ ಇಸ್ರೇಲ್ (Israel), ಪ್ರತೀಕಾರದ ಬಾಂಬ್ ದಾಳಿಯಾಗಿ ರಾತ್ರೋರಾತ್ರಿ ಗಾಜಾದಾದ್ಯಂತ ವೈಮಾನಿಕ ದಾಳಿ (Air Strike) ನಡೆಸಿತು. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ದಾಳಿಯಲ್ಲಿ ಕನಿಷ್ಠ 900 ಜನರು ಸಾವನ್ನಪ್ಪಿದ್ದಾರೆ ಮತ್ತು 4,600 ಜನರು ಗಾಯಗೊಂಡಿದ್ದಾರೆ. ವಾರಾಂತ್ಯದ ಹಮಾಸ್ ದಾಳಿಯಲ್ಲಿ (Hamas Attack) ಸಾವನ್ನಪ್ಪಿದವರ ಸಂಖ್ಯೆ 1,200 ಮೀರಿದೆ ಎಂದು ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.
Advertisement
ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 15 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ. ಬುಧವಾರ ರಾತ್ರಿ, ಇಸ್ರೇಲ್ ಗಾಜಾದಾದ್ಯಂತ ವೈಮಾನಿಕ ದಾಳಿ ನಡೆಸಿದ ಪರಿಣಾಮ 900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಬಹುತೇಕ ಯುದ್ಧ ವಾಯು ಮಾರ್ಗದ ಮೂಲಕವೇ ನಡೆಯುತ್ತಿದೆ. ಒಂದು ಕಡೆ ಹಮಾಸ್ ನಿರಂತರ ರಾಕೆಟ್ ದಾಳಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಇಸ್ರೇಲ್ ಯುದ್ಧ ವಿಮಾನಗಳ ಏರ್ ಸ್ಟ್ರೈಕ್ ಮಾಡುತ್ತಿದೆ. ಬುಧವಾರ ರಾಕೆಟ್ ದಾಳಿಗೆ ಪ್ರಯತ್ನಿಸಿ ಹಮಾಸ್ ಪ್ರಯತ್ನಗಳನ್ನು ಐರನ್ ಡೋಮ್ ರಕ್ಷಣಾ ಕ್ಷಿಪಣಿ ತಡೆದಿದೆ. ಇಸ್ರೇಲ್‌ನ ಅಶ್ಕೆಲೋನ್ ಮೇಲೆ ನಿನ್ನೆ ಹಮಾಸ್ ರಾಕೆಟ್ ದಾಳಿ ಮಾಡಿತ್ತು. ಆದರೆ ಇಸ್ರೇಲ್‌ನ ಐರನ್ ಡೋಮ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಿಂದ ರಾಕೆಟ್‌ಗಳನ್ನು ತಡೆದು ಗಾಳಿಯಲ್ಲಿ ಅವುಗಳನ್ನು ನಾಶ ಮಾಡಿತು. ಇದನ್ನೂ ಓದಿ: ಮಕ್ಕಳನ್ನೂ ಬಿಡದೇ ಗಲ್ಲಿಗೇರಿಸುತ್ತಿದ್ದಾರೆ – ಝೊಂಬಿ ವೈರಸ್‌ನಂತೆ ನರಕಯಾತನೆ ಅನುಭವಿಸ್ತಿದ್ದಾರೆ; ಇಸ್ರೇಲ್ ರಕ್ಷಣಾ ಪಡೆ ವಿಷಾದ
Advertisement
ಗಾಜಾದಲ್ಲಿರುವ ಏಕೈಕ ವಿದ್ಯುತ್ ಕೇಂದ್ರವು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇಸ್ರೇಲ್ ಗಾಜಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸುವುದಾಗಿ ಹೇಳಿದ ಎರಡು ದಿನಗಳ ನಂತರ ವಿದ್ಯುತ್ ಪೂರೈಕೆ ನಿಂತಿದೆ. ಇದಲ್ಲದೇ ಈ ಪ್ರದೇಶಕ್ಕೆ ಆಹಾರ ಮತ್ತು ಇಂಧನವನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಪ್ಯಾಲೇಸ್ತೀನ್ ಇಸ್ರೇಲ್ ಯುದ್ಧದ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್, ನಾವು ಇಸ್ರೇಲ್ ಪರವಾಗಿ ನಿಲ್ಲಲ್ಲಿದ್ದೇವೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಇಸ್ರೇಲ್ ತನ್ನ ಮತ್ತು ನಾಗರಿಕರ ಸುಕರಕ್ಷತೆಗಾಗಿ ಪ್ರತಿದಾಳಿ ಆರಂಭಿಸಿದೆ. ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ಸಮರ್ಥನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡೋ ಚಿತ್ರಗಳನ್ನು ಯಾವತ್ತೂ ನೋಡುತ್ತೇನೆ ಎಂದುಕೊಂಡಿರಲಿಲ್ಲ: ಆಘಾತ ವ್ಯಕ್ತಪಡಿಸಿದ ಬೈಡನ್
ಪ್ಯಾಲೇಸ್ತೀನಿಯನ್ ಇಸ್ಲಾಮಿಸ್ಟ್ ಗುಂಪು ಹಮಾಸ್ ಅನ್ನು ಕಿತ್ತುಹಾಕಲು ಇಸ್ರೇಲ್ ಈ ಯುದ್ಧ ಮಾಡುತ್ತಿದೆ. ನಮ್ಮ ಪ್ರತಿ ದಾಳಿಯಿಂದ ವಿಶ್ವದಾದ್ಯಂತ ದಾಳಿಗಳನ್ನು ಇಂತಹ ಸಂಘಟನೆಗಳು ದಾಳಿ ನಡೆಸುವುದನ್ನು ತಡೆಯಬಹುದು ಎಂದು ದೇಶದ ಗುಪ್ತಚರ ಸಚಿವ ಗಿಲಾ ಗ್ಯಾಮ್ಲಿಯೆಲ್ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾವು ಅದನ್ನು ಬೇರು ಸಹಿತ ಕಿತ್ತುಹಾಕಬೇಕು ಇದರಂದ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸುವುದಿಲ್ಲ. ಭವಿಷ್ಯದ ದಾಳಿಗಳಿಗೆ ಇಸ್ರೇಲ್‌ನಲ್ಲಿ ಏನಾಯಿತು ಎಂಬುದನ್ನು ಉದಾಹರಣೆಯಾಗಿರಲಿದೆ ಎಂದು ಗ್ಯಾಮ್ಲಿಯೆಲ್ ಹೇಳಿದರು.
ಗಾಜಾದ ನಬ್ಲಸ್‌ನ ದಕ್ಷಿಣದಲ್ಲಿರುವ ಕುಸ್ರಾ ಗ್ರಾಮದಲ್ಲಿ ಇಸ್ರೇಲ್ ಸೈನಿಕರು ಪ್ಯಾಲೆಸ್ತೀನಿಯನ್ನರ ಮೇಲೆ ನೇರ ಗುಂಡು ಹಾರಿಸುತ್ತಿದ್ದಾರೆ. ಗಾಯಾಳುಗಳನ್ನು ತಲುಪಲು ಸೇನೆಯು ಅಂಬುಲೆನ್ಸ್ಗಳನ್ನು ಅನುಮತಿಸುತ್ತಿಲ್ಲ ಎಂದು ಗ್ರಾಮದ ಕಾರ್ಯಕರ್ತ ಫುವಾದ್ ಹಸನ್ ಹೇಳಿದ್ದಾರೆ. ಇಲ್ಲಿಯವರೆಗೆ ಗ್ರಾಮದಲ್ಲಿ ಮೂರು ಪ್ಯಾಲೆಸ್ತೀನಿಯರನ್ನು ಕೊಲ್ಲಲಾಗಿದೆ ಮತ್ತು ಆರು ಜನರು ಗಾಯಗೊಂಡಿದ್ದಾರೆ. 24 ವರ್ಷದ ಯುವಕನ ಹೊಟ್ಟೆಗೆ ಜೀವಂತ ಗುಂಡುಗಳಿಂದ ಹೊಡೆದಿದ್ದಾರೆ. ಆರು ವರ್ಷದ ಬಾಲಕಿಯ ಭುಜಕ್ಕೆ ಜೀವಂತ ಗುಂಡುಗಳು ತಾಗಿದೆ. ಎಲ್ಲರನ್ನು ಸಾಲ್ಫಿಟ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಕಿರುತೆರೆ ನಟಿ ಮಧುರಾ ನಾಯ್ಕ್ ಕುಟುಂಬಸ್ಥರ ಹತ್ಯೆ
ಇಸ್ರೇಲ್‌ನಲ್ಲಿ ಮೂವರು ಕೆನಡಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಕೆನಡಾದ ವಿದೇಶಾಂಗ ಸಚಿವ ಮೆಲಾನಿ ಜೋಲಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಲಿ, ಇಸ್ರೇಲ್, ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ 4,700 ಕ್ಕೂ ಹೆಚ್ಚು ಕೆನಡಾದ ನಾಗರಿಕರು ಮತ್ತು ಖಾಯಂ ನಿವಾಸಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಆರು ಜನರ ಸಂಪರ್ಕ ಇಲ್ಲ ಎಂದಿದ್ದಾರೆ.
ಹಮಾಸ್ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನ ಅಶ್ಕೆಲಾನ್ ಆಸ್ಪತ್ರೆಗೆ ಹಾನಿಯಾಗಿದ್ದು, ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಗಾಜಾದಿಂದ ದಕ್ಷಿಣ ಇಸ್ರೇಲ್ ಕಡೆಗೆ ರಾಕೆಟ್ ದಾಳಿಯಾಗಿದೆ. ಆಸ್ಪತ್ರೆಯೊಂದಕ್ಕೆ ಹಾನಿಯಾಗಿದೆ ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಶ್ಕೆಲೋನ್ ನಗರದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಶ್ಕೆಲೋನ್‌ನ ಬಾರ್ಜಿಲೈ ಆಸ್ಪತ್ರೆಯಲ್ಲಿರುವ ಮಕ್ಕಳ ಅಭಿವೃದ್ಧಿ ಕೇಂದ್ರವು ಗಾಜಾದಿಂದ ಬಂದ ಉತ್ಕ್ಷೇಪಕದಿಂದ ನೇರ ಹೊಡೆತವನ್ನು ಅನುಭವಿಸಿದೆ ಎಂದು ಆರೋಗ್ಯ ಸೌಲಭ್ಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ರಾಕೆಟ್ ಹಾರಿಸಿರುವುದಾಗಿ ಹಮಾಸ್ ಹೇಳಿದೆ. ಆದರೆ ಈವರೆಗೂ ಯಾವುದೇ ದಾಳಿಯಾಗಿಲ್ಲ. ಇದನ್ನೂ ಓದಿ: ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ
ಪ್ಯಾಲೇಸ್ತೀನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಇತರೆ ದೇಶಗಳಿಗೆ ವ್ಯಾಪಿಸುತ್ತಿದೆ. ಹಮಾಸ್‌ಗೆ ಇರಾನ್, ಲೆಬನಾನ್‌ಗೆ ಬೆಂಬಲ ನೀಡಿದ್ದು ಇಸ್ರೇಲ್ ಗಡಿಯಲ್ಲಿ ದಾಳಿ ಮಾಡುತ್ತಿವೆ. ಇದಕ್ಕೆ ತಿರುಗೇಟು ನೀಡುತ್ತಿರುವ ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿರುವ ಧೈರಾ ಗ್ರಾಮದಲ್ಲಿ ಶೆಲ್ ದಾಳಿ ನಡೆಸಿತು. ಬಳಿಕ ಲೆಬನಾನಿನ ಸೇನೆಯ ಸದಸ್ಯರು ಹಾನಿಗೊಳಗಾದ ಕಟ್ಟಡದ ಬಳಿ ಪರಿಶೀಲನೆ ನಡೆಸಿದ್ದಾರೆ. ಉಗ್ರಗಾಮಿ ಗುಂಪು ಹೆಜ್ಬೊಲ್ಲಾ ಇಸ್ರೇಲ್ ಮೇಲಿನ ದಾಳಿಯ ಜವಬ್ದಾರಿ ವಹಿಸಿಕೊಂಡಿದೆ.
ಪ್ಯಾಲೇಸ್ತೀನ್ ಉಗ್ರಗಾಮಿ ಗುಂಪು ಹಮಾಸ್‌ನ ದಾಳಿಯ ನಂತರ ಇಸ್ರೇಲಿ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಇಸ್ರೇಲ್‌ಗೆ ತಲುಪಿದ್ದಾರೆ. ಹಮಾಸ್‌ನ ಭಯೋತ್ಪಾದಕ ದಾಳಿಯ ನಂತರ ಇಸ್ರೇಲಿ ಜನರೊಂದಿಗೆ ಬ್ರಿಟನ್ ಅಚಲವಾದ ಒಗ್ಗಟ್ಟನ್ನು ಪ್ರದರ್ಶಿಸಲು ಈ ಭೇಟಿ ನೀಡಲಾಗುತ್ತಿದೆ ಎಂದು ಎಂದು ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಭೇಟಿ ವೇಳೆ ಅವರು ದಾಳಿಯಿಂದ ಬದುಕುಳಿದವರನ್ನು ಮತ್ತು ಹಿರಿಯ ಇಸ್ರೇಲಿ ನಾಯಕರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ
Web Stories