ಮಕ್ಕಳನ್ನೂ ಬಿಡದೇ ಗಲ್ಲಿಗೇರಿಸುತ್ತಿದ್ದಾರೆ – ಝೊಂಬಿ ವೈರಸ್‌ನಂತೆ ನರಕಯಾತನೆ ಅನುಭವಿಸ್ತಿದ್ದಾರೆ; ಇಸ್ರೇಲ್ ರಕ್ಷಣಾ ಪಡೆ ವಿಷಾದ

Public TV
2 Min Read
Israel 8

ಜೆರುಸಲೆಂ: ಇಸ್ರೇಲ್-ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಕಾಳಗ (Israel Hamas war) ದಿನೇ ದಿನೇ ರಣರಂಗವಾಗುತ್ತಿದೆ. 5 ಸಾವಿರ ರಾಕೆಟ್‌ ದಾಳಿಯಿಂದ 1,200ಕ್ಕೂ ಹೆಚ್ಚು ಇಸ್ರೇಲಿಗಳನ್ನು ಕೊಂದ ಹಮಾಸ್‌ ಗುಂಪು ತನ್ನ ಉಗ್ರ ಕೃತ್ಯವನ್ನು ಮುಂದುವರಿಸಿದೆ. ಹಲವಾರು ಇಸ್ರೇಲೆಗಳನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಜೊತೆಗೆ ಮಹಿಳೆಯರು, ಮಕ್ಕಳನ್ನೂ ನೋಡದೇ ಕೈಗಳಿಗೆ ಕೋಳ ಹಾಕಿ ಗಲ್ಲಿಗೇರಿಸಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಮಾಹಿತಿ ಹಂಚಿಕೊಂಡಿವೆ.

ಈ ಸಂಬಂಧ ವೀಡಿಯೋನಲ್ಲಿ ಮಾತನಾಡಿರುವ ಇಸ್ರೇಲ್‌ ರಕ್ಷಣಾ ಪಡೆಗಳ ಮುಖ್ಯ ವಕ್ತಾರ ಜೊನಾಥನ್ ಕಾನ್ರಿಕಸ್, ಇಸ್ರೇಲ್‌ನಿಂದ ಅಪಹರಿಸಲಾದ ಶಿಶುಗಳನ್ನು ಹಮಾಸ್‌ ಉಗ್ರರ ಗುಂಪು ಗಲ್ಲಿಗೇರಿಸುವ ಮೂಲಕ ಅಮಾನುಷ ಕೃತ್ಯಗಳನ್ನು ನಡೆಸುತ್ತಿದೆ. ಅದಕ್ಕೆ ಸಾಕ್ಷ್ಯಗಳೂ ಸಿಕ್ಕಿವೆ. ಗಾಜಾ ಪಟ್ಟಿಯಲ್ಲಿ ಮಹಿಳೆಯರು, ಮಕ್ಕಳೆಂದು ನೋಡದೇ ಕೈಗಳಿಗೆ ಕೋಳ ಹಾಕಿ ಗಲ್ಲಿಗೇರಿಸಲಾಗುತ್ತಿದೆ. ಒಂದು ರೀತಿ ಝೊಂಬಿ ವೈರಸ್‌ ಪೀಡಿತರ ಚಲನಚಿತ್ರ ದೃಶ್ಯಗಳು ಕಂಡು ಬಂದ ರೀತಿಯಲ್ಲಿ ಇಸ್ರೇಲಿಗಳು ನರಕಯಾತನೆಗೆ ಒಳಗಾಗಿದ್ದಾರೆ. ಇದನ್ನೂ ಇಸ್ರೇಲ್‌ ರಕ್ಷಣಾ ಪಡೆಗಳು ಕಣ್ಣಾರೆ ಕಂಡಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ISREAL 3

ಗಾಜಾಪಟ್ಟಿಯಲ್ಲಿ ಹಮಾಸ್ ಸುರಂಗಗಳು ಮತ್ತು ಬಂಕರ್‌ಗಳ ಜಾಲವನ್ನು ಹೊಂದಿದೆ. ಈ ಸುರಂಗ ಜಾಲವನ್ನು ಧ್ವಂಸಗೊಳಿಸಲು ಇಸ್ರೇಲ್‌ ವೈಮಾನಿಕ ದಾಳಿ ನಡೆಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ

ಇನ್ನೂ ಹಮಾಸ್‌ ಉಗ್ರರ ದಾಳಿ ಕುರಿತು ಮಾತನಾಡಿರುವ ಜೋ ಬೈಡನ್‌, ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡುವ ಚಿತ್ರಗಳನ್ನ ನಾನು ನೋಡುತ್ತೇನೆ ಅಂದುಕೊಂಡಿರಲಿಲ್ಲ. ಈ ದಾಳಿಯು ಅವರ ಕ್ರೂರತೆಯನ್ನು ತೋರಿಸುತ್ತದೆ ಎಂದು ವಿಷಾದಿಸಿದ್ದಾರೆ.

ಶನಿವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಅದನ್ನು ಮಾರಣಾಂತಿಕ ದಿನ ಎಂದು ಬೈಡನ್ ಕರೆದಿದ್ದಾರೆ. ಹಮಾಸ್ ಭಯೋತ್ಪಾದಕ ದಾಳಿ ಯಹೂದಿ ಜನರ ವಿರುದ್ಧ ನಡೆಸಲಾಗಿದ್ದು, ಸಹಸ್ರಾರು ಯಹೂದಿಗಳ ನರಮೇಧದ ನೋವಿನ ನೆನಪುಗಳನ್ನು ಮರಳಿ ತಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್-ಇಸ್ರೇಲ್‌ ಸಂಘರ್ಷದಲ್ಲಿ 14 ಅಮೆರಿಕನ್ನರ ಸಾವು; ದಾಳಿಯನ್ನು ಖಂಡಿಸಿದ ಜೋ ಬೈಡನ್

ಹಮಾಸ್ ಉಗ್ರರ ದಾಳಿಗೆ ಇಲ್ಲಿಯವರೆಗೆ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಅದರಲ್ಲಿ ಕನಿಷ್ಠ 22 ಅಮೆರಿಕನ್ನರು ಸೇರಿದ್ದಾರೆ. ನಾವು ಇಸ್ರೇಲ್ ನಾಯಕರು, ಪ್ರಪಂಚದಾದ್ಯಂತ ಹಲವಾರು ನಾಯಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Web Stories

Share This Article