ಟೆಲ್ ಅವಿವ್, ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು ಇರಾನ್‌ಗೆ (Iran) ಇಂದು ಇಸ್ರೇಲ್, ಅಮೆರಿಕ ಭಾರೀ ತಿರುಗೇಟು ನೀಡಿದೆ.
ಇರಾನ್‌ನ ಪರಮಾಣು ಘಟಕ ನಟಾಂಜ್ ಮೇಲೆ ದಾಳಿಯಾಗಿರುವುದನ್ನು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯಾದ ಅಂತರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (IAEA) ಖಚಿತ ಪಡಿಸಿದೆ. ಆದರೆ ವಿಕಿರಣ ಸೋರಿಕೆ ಭೀತಿ ಇಲ್ಲ ಎಂದು ಹೇಳಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಅಧ್ಯಕ್ಷರ ಕಚೇರಿ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಇರಾನ್‌ನ ವಿವಿಧೆಡೆ ಇರುವ ಐಆರ್‌ಜಿಸಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳನ್ನು ಟಾರ್ಗೆಟ್ ಮಾಡಿರುವ ಅಮೆರಿಕದ (USA) ಮಿಸೈಲ್, ಡ್ರೋನ್ ಟ್ಯಾಕ್ ಮಾಡಿದೆ. ಹೀಗಾಗಿ ಇರಾನ್‌ನ ಬಂದರುನಗರಿ ಬುಶೆಹರ್‌ನ ಜಾಮ್-ದಿರ್ ನಗರಗಳಲ್ಲಿ ಐಆರ್‌ಜಿಸಿಯ ವಾಯುಪಡೆ ಮತ್ತು ನೌಕಾಪಡೆಯ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಆಗ್ನೇಯ ಇರಾನ್‌ನ ವಾಯುನೆಲೆ ಮೇಲೆ ಇಸ್ರೇಲ್ (Isreal) ನಡೆಸಿರುವ ವೈಮಾನಿಕ ದಾಳಿಯಲ್ಲಿ 13 ಇರಾನ್ ಸೈನಿಕರು ಬಲಿಯಾಗಿದ್ದಾರೆ. ಇದನ್ನೂ ಓದಿ: ಯುದ್ಧದ ಮಧ್ಯೆ ಟ್ರಂಪ್‌ಗೆ ಕಾಡ್ತಿದೆಯಾ ಚರ್ಮರೋಗ? – ಫೋಟೋ ವೈರಲ್
🇮🇷 Video shows the aftermath of an IRGC building strike in Tehran.
“Top Secret” papers are all over the street, including one that gives an extra paid day off for completing the task.pic.twitter.com/Ln2Dz7JYWH https://t.co/TnweewnRsK
— Mario Nawfal (@MarioNawfal) March 3, 2026
ಹೆಜ್ಬುಲ್ಲಾ ಉಗ್ರರ ಬೇಟೆಗೆ ಲೆಬನಾನ್‌ಗೆ ನೆಲಮಾರ್ಗದಲ್ಲಿ ದಾಳಿ ಮಾಡಲು ಇಸ್ರೇಲ್ ಪ್ರಧಾನಿ ನೆತನ್ಯಾಹು (Benjamin Netanyahu) ಸೇನೆಗೆ ಅನುಮತಿ ಕೊಟ್ಟಿದ್ದಾರೆ. ಇರಾನ್ ದಾಳಿಯನ್ನು ಕೊಲ್ಲಿರಾಷ್ಟ್ರಗಳು ಏರ್‌ಡಿಫೆನ್ಸ್ ಸಿಸ್ಟಮ್ ಮೂಲಕ ಪ್ರತಿರೋಧಿಸುತ್ತಿವೆ.
ಕುವೈತ್ 178 ಬ್ಯಾಲಿಸ್ಟಿಕ್ ಕ್ಷಿಪಣಿ, 384 ಡ್ರೋನ್‌ಗಳನ್ನು ತಡೆಹಿಡಿದಿದ್ದರೆ, ಯುಎಇ 169 ಕ್ಷಿಪಣಿಗಳು, 645 ಡ್ರೋನ್‌ಗಳನ್ನು ತಡೆಹಿಡಿದಿದೆ. ಬಹ್ರೇನ್ 70 ಕ್ಷಿಪಣಿ, 76 ಡ್ರೋನ್, ಕತಾರ್ 101 ಕ್ಷಿಪಣಿ, 24 ಡ್ರೋನ್ ಅನ್ನು ತಡೆಹಿಡಿದಿದೆ. ಇದನ್ನೂ ಓದಿ: ರಾಷ್ಟ್ರಗೀತೆಯನ್ನು ಹಾಡಲ್ಲ – ಇರಾನ್ ಮಹಿಳಾ ತಂಡದಿಂದ ಮೈದಾನದಲ್ಲೇ ಇಸ್ಲಾಮಿಕ್ ಆಡಳಿತದ ವಿರುದ್ಧ ಪ್ರತಿಭಟನೆ

