ಟೆಲ್ ಅವೀವ್: ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪಶ್ಚಿಮ ಏಷ್ಯಾ ರಣಾಂಗಣವಾಗಿ ಮಾರ್ಪಟ್ಟಿದ್ದು, ದಿನೇ ದಿನೇ ಯುದ್ಧದ ತೀವ್ರತೆ ಅಧಿಕವಾಗುತ್ತಿದೆ. ಈಗಾಗಲೇ ಗಾಜಾಪಟ್ಟಿಗೆ (Gaza Strip) ಅಷ್ಟದಿಗ್ಬಂಧನ ವಿಧಿಸಿರುವ ಇಸ್ರೇಲ್ (Israel) ಗಾಜಾ ನಗರದ ಮೇಲೆ ವೈಮಾನಿಕ ದಾಳಿ ಮೂಲಕ ಮುಗಿಬಿದ್ದಿದೆ.
ಹಮಾಸ್ (Hamas) ಕೂಡ ನಿರಂತರವಾಗಿ ಇಸ್ರೇಲ್ ಕಡೆ ರಾಕೆಟ್ ದಾಳಿ ನಡೆಸುತ್ತಲೇ ಇದೆ. ಮತ್ತೊಂದು ಕಡೆ ಸಿರಿಯಾ, ಲೆಬನಾನ್ ಕಡೆಯಿಂದ ಉಗ್ರರು ಇಸ್ರೇಲ್ ಮೇಲೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ಇಸ್ರೇಲ್‌ನಲ್ಲಿ ಸೈರನ್ ಮೊರೆತ ನಿಲ್ಲುತ್ತಲೇ ಇಲ್ಲ. ಇದರಿಂದ ಯುದ್ಧದ ಸ್ವರೂಪ ಮತ್ತು ವ್ಯಾಪ್ತಿ ಇನ್ನಷ್ಟು ವಿಸ್ತರಣೆ ಆಗುವ ಆತಂಕ ಎದುರಾಗಿದೆ.
Advertisement
(trigger warning)
Don’t
Look
Away #HamasISIS pic.twitter.com/GINSyiI1fk
— Israel ישראל ???????? (@Israel) October 12, 2023
Advertisement
ಇಸ್ರೇಲ್-ಪ್ಯಾಲೆಸ್ಟೈನ್ (Israel Palestine) ಯುದ್ಧದಲ್ಲಿ ಇತರರು ಮೂಗು ತೂರಿಸಬಾರದು ಎಂದು ಅಮೆರಿಕ (USA) ನೀಡುತ್ತಿರುವ ಎಚ್ಚರಿಕೆಯನ್ನು ಅರಬ್ ದೇಶಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾರು ಮಧ್ಯಪ್ರವೇಶ ಮಾಡಬಾರದು ಎನ್ನುವ ಅಮೆರಿಕ ಸ್ವತಃ ಇಸ್ರೇಲ್‌ಗೆ ಒಂದು ವಿಮಾನ ಭರ್ತಿ ಶಸ್ತಾಸ್ತ್ರ ಕಳಿಸಿದೆ. ಅಷ್ಟೇ ಅಲ್ಲದೇ ಇಂದು ಟೆಲ್ ಅವೀವ್‌ಗೆ ಅಮೆರಿಕ ಮತ್ತು ಬ್ರಿಟನ್ ವಿದೇಶಾಂಗ ಮಂತ್ರಿ ಭೇಟಿ ನೀಡಿದ್ದಾರೆ.
Advertisement
ಒಫಾಕಿಮ್‌ನಲ್ಲಿ ಕೇಳಿಬಂದ ಸೈರನ್ ಸದ್ದು ಮತ್ತು ರಾಕೆಟ್ ನುಗ್ಗಿ ಬಂದಿದ್ದನ್ನು ನೋಡಿ ಬ್ರಿಟನ್ ಮಂತ್ರಿ ಜೇಮ್ಸ್ ಪ್ರಾಣಭಯದಿಂದ ದಿಕ್ಕೆಟ್ಟು ಓಡಿದ್ದಾರೆ. ಈ ಮೂಲಕ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಇಸ್ರೇಲ್‌ನಲ್ಲಿ ಸರ್ವಪಕ್ಷ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದನ್ನೂ ಓದಿ: ಹೊಸಪೇಟೆಯಲ್ಲಿ ಹಮಾಸ್ ಉಗ್ರರ ಪರ ಸ್ಟೇಟಸ್ ಹಾಕಿದ್ದ ಯುವಕ ವಶಕ್ಕೆ
Advertisement
We debated whether or not to share these horrific images, but the world needs to know what we are up against.
These aren’t “freedom fighters”. They are Hamas terrorists, but no different than ISIS terrorists.
Same tactics, different names.
Hamas = ISIS pic.twitter.com/nLGykHQ10y
— Israel Foreign Ministry (@IsraelMFA) October 12, 2023
ಇಸ್ರೇಲ್ ಸಂಸದೆ ತಾಲಿ ಗಾಟ್ಲಿಟ್ ಟ್ವೀಟ್ ಮಾಡಿ, ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗ ಆಗ್ಬೇಕು ಅಂತಿದ್ದಾರೆ. ಪ್ರಳಯವನ್ನು ಸೃಷ್ಟಿಸುವ ಆಯುಧವನ್ನು ವಿನಿಯೋಗಿಸಬೇಕು. ಈಗ ಡೂಮ್ಸ್ ಡೇಯನ್ನು ಮುದ್ದಾಡುವ ಸಮಯ ಬಂದಿದೆ. ದೇವರೇ ನಮ್ಮ ಶಕ್ತಿಯನ್ನು ಕಾಪಾಡು ಎಂದು ಟ್ವೀಟ್ ಮಾಡಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಈ ಯುದ್ಧ ಮೂರನೇ ಮಹಾ ಯುದ್ಧಕ್ಕೆ ದಾರಿ ಮಾಡಿಕೊಡಬಹುದಾ ಎಂಬ ಚರ್ಚೆಗಳು ಶುರುವಾಗಿವೆ.
ಮೂರನೇ ಮಹಾ ಯುದ್ಧ ನಡೆಯುತ್ತಾ?
ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್, ಸಿರಿಯಾ, ಲೆಬನಾನ್ ಕಡೆಯಿಂದ ದಾಳಿ ಆರಂಭವಾಗಿದೆ. ಪ್ಯಾಲೆಸ್ಟೈನ್ ಬೆಂಬಲಕ್ಕೆ ಇರಾನ್, ಸೌದಿ, ಕತಾರ್, ಕುವೈತ್, ದಕ್ಷಿಣ ಆಫ್ರಿಕಾ ಬೆಂಬಲ ನೀಡಿದೆ. ಇಸ್ರೇಲ್ ಬೆಂಬಲಕ್ಕೆ ಅಮೆರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಭಾರತ, ಆಸ್ಟ್ರೇಲಿಯಾ ನಿಂತಿದೆ.
ಅಮೆರಿಕ ಯುದ್ಧ ವಿಮಾನ, ಯುದ್ಧನೌಕೆ ಕಳಿಸಿದ್ದಕ್ಕೆ ಟರ್ಕಿ ಗರಂ ಆಗಿದ್ದು ಮಾರಣಕಾಂಡಕ್ಕೆ ದಾರಿ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಅಮೆರಿಕದ ಸ್ಥಾವರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಇರಾಕ್‌ನ ಉಗ್ರ ಸಂಘಟನೆ ಕತೈಬ್ ಹೆಜ್ಬುಲ್ಲಾ ಮಿಲಿಷಿಯಾ. ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ ತಡೆಯುವ ಸಂಬಂಧ ಇರಾನ್-ಸೌದಿ ನಾಯಕರು ಮಾತುಕತೆ ನಡೆಸಿದ್ದಾರೆ.
Web Stories