– ಶಾಸಕ ನಾಗೆಂದ್ರರಿಂದ ವಿಮಾನದ ವ್ಯವಸ್ಥೆ
ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ (Israel Iran War) ನಡುವಿನ ಯುದ್ಧದಿಂದ ದುಬೈನಲ್ಲಿ (Dubai) ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬಳ್ಳಾರಿಯ (Ballari) 35 ಮಂದಿ ಹಾಗೂ ಚಿತ್ರದುರ್ಗ 15 ಮಂದಿ ಸೇರಿ 246 ಕನ್ನಡಿಗರು ಮಾ.4 ರಂದು ಶಾರ್ಜಾ ದಿಂದ ಕೊಚ್ಚಿನ್‍ಗೆ ಬಂದಿಳಿದಿದ್ದರು. 50 ಮಂದಿಗೆ ಅಲ್ಲಿಂದ ಬೆಂಗಳೂರಿಗೆ (Bengaluru) ಶಾಸಕ ಬಿ ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಮಾಡಿದ್ದರು. ಇಂದು ಬೆಳಗ್ಗೆ (ಮಾ.5) ಅವರೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇದನ್ನೂ ಓದಿ: ದುಬೈನಿಂದ ಮತ್ತಷ್ಟು ಕನ್ನಡಿಗರು ಬೆಂಗಳೂರಿಗೆ ವಾಪಸ್
ಕೊಚ್ಚಿನ್‍ನಿಂದ ಬೆಂಗಳೂರಿಗೆ ಬಂದಿಳಿದ ಕನ್ನಡಿಗರನ್ನು ನಾಗೇಂದ್ರ ಅವರು ಬರಮಾಡಿಕೊಂಡಿದ್ದಾರೆ. ಶಾಸಕರ ಸಹಾಯವನ್ನು ಕನ್ನಡಿಗರು ಕೊಂಡಾಡಿದ್ದಾರೆ. ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಕ್ಕೆ ಕನ್ನಡಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ಆಪರೇಷನ್ ಎಪಿಕ್ ಫ್ಯೂರಿ’ – ಇರಾನ್ ವಿರುದ್ಧದ ಯುದ್ಧಕ್ಕೆ 100 ಗಂಟೆ; ವೀಡಿಯೋ ಹಂಚಿಕೊಂಡ ಯುಎಸ್

